ಆನಂದ ಭೈರವಿ ಸಿನಿಮಾಗಾಗಿ 55ನೇ ವಯಸ್ಸಿನಲ್ಲಿ 'ಕೂಚಿಪುಡಿ' ಕಲಿತ ಗಿರೀಶ್ ಕಾರ್ನಾಡ್!
ಆನಂದ ಭೈರವಿ ಸಿನಿಮಾದಲ್ಲಿ ನಟ ಗಿರೀಶ್ ಕಾರ್ನಾಡ್ ಅವರು ನಾರಾಯಣ ಶರ್ಮಾ ಎಂಬ ನಾಟ್ಯ ಗುರುಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಪಾತ್ರ ...

Published On :
ಬೆಂಗಳೂರು: ಆನಂದ ಭೈರವಿ ಸಿನಿಮಾದಲ್ಲಿ ನಟ ಗಿರೀಶ್ ಕಾರ್ನಾಡ್ ಅವರು ನಾರಾಯಣ ಶರ್ಮಾ ಎಂಬ ನಾಟ್ಯ ಗುರುಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಪಾತ್ರ ಕಾರ್ನಾಡ್ ಅವರಿಗೆ ನೆಚ್ಚಿನ ಪಾತ್ರವಾಗಿತ್ತು,
ಆನಂದ ಬೈರವಿ ಪಾತ್ರಕ್ಕಾಗಿ ತುಂಬಾ ಶ್ರಮ ವಹಿಸಿದ್ದರು. ತಮ್ಮ 50ನೇ ವಯಸ್ಸಿನಲ್ಲಿ ಕೂಚಿಪುಡಿ ನೃತ್ಯ ಕಲಿತು 7 ದಿನಗಳಲ್ಲಿ ಪಾತ್ರಕ್ಕಾಗಿ ತಯಾರಾಗಿದ್ದರು. ಸಂಪ್ರದಾಯ ಬ್ರಾಹ್ಮಣ ಕುಟುಂಬದ ಶರ್ಮಾ ಎಂಬ ಪಾತ್ರ ಇದಾಗಿತ್ತು, ಕಾರ್ನಾಡ್ ಕೂಚುಪುಡಿ ನೃತ್ಯದ ಬಗ್ಗೆ ವಿಶೇಷ ಅಭಿರುಚಿ ಹೊಂದಿದ್ದರು.
ಈ ಸಿನಿಮಾದಲ್ಲಿ ತಂದೆಗೆ ನೃತ್ಯದ ಬಗ್ಗೆ ಹೆಚ್ಚಿನ ಪ್ರೀತಿ, ಆದರೆ ಮಗನಿಗೆ ಕೂಚುಪುಡಿ ನೃತ್ಯದ ಬಗ್ಗೆ ಆಸಕ್ತಿಯಿರುವುದಿಲ್ಲ, ಇನ್ನೂ ದಲಿತ ಸಮುದಾಯದ ಬಂಜಾರ ಹುಡುಗಿಗೆ ನೃತ್ಯ ಕಲಿಸಲು ಆಕೆಯನ್ನು ಕರೆತರುತ್ತಾರೆ, ಆಕೆಗೆ ತರಬೇತಿ ನೀಡಿ, ಕ್ಲಾಸಿಕಲ್ ಡ್ಯಾನ್ಸ್ ಕಲಿಸುತ್ತಾರೆ, ಈ ಸಿನಿಮಾದಲ್ಲಿ ಕಾರ್ನಾಡ್ ಅವರ ಕೂಚುಪುಡಿ ನೃತ್ಯವೇ ಹೈಲೈಟ್ ಆಗಿದೆ.
ನಾನು ತರಬೇತಿ ಪಡೆದ ಡ್ಯಾನ್ಸರ್,1989 ರಲ್ಲಿ ಶಿಶುನಾಳ ಷರೀಫ ಸಿನಿಮಾ ಬರುವವರೆಗೂ ಅವರು ಒಳ್ಳೆಯ ಡ್ಯಾನ್ಸರ್ ಎಂದು ತಿಳಿದಿರಲಿಲ್ಲ ಎಂದು ನೃತ್ಯಪಟು ಶ್ರೀಧರ್ ತಿಳಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


