ಬಹುಭಾಷಾ ನಟಿಗೆ ಕೂಡಿಬಂತು ಕಂಕಣಬಲ: ಉದ್ಯಮಿ ಜತೆ ಹಸೆಮಣೆ ಏರಿದ ಸುಮನ್ ರಂಗನಾಥನ್
ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸುಮನ್ ರಂಗನಾಥನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಉದ್ಯಮಿ ಸಜನ್ ಅವರೊಡನೆ ಸೋಮವಾರ ಅವರು ಸಪ್ತಪದಿ ತುಳಿದಿದ್ದಾರೆ.

Published On :
ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸುಮನ್ ರಂಗನಾಥನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಉದ್ಯಮಿ ಸಜನ್ ಅವರೊಡನೆ ಸೋಮವಾರ ಅವರು ಸಪ್ತಪದಿ ತುಳಿದಿದ್ದಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಬಹುಭಾಷೆಗಳಲ್ಲಿ ಅಭಿನಯಿಸಿರುವ ನಟಿ ಸುಮನ್ ರಂಗನಾಥ್ ಕೊಡಗು ಮೂಲದ ಸಜನ್ ಅವರನ್ನು ವರಿಸಿದ್ದಾರೆ.
ಮದುವೆ ಅಥವಾ ಪ್ರೀತಿಯ ಬಗೆಗೆ ನಟಿ ಇದುವರೆಗೆ ಯಾರೊಡನೆ ಯಾವ ವಿಚಾರವನ್ನೂ ಹಂಚಿಕೊಂಡಿಲ್ಲದಿದ್ದರೂ ಸೋಮವಾರ ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ವಿವಾಹವಾಗಿದ್ದಾರೆ.
ಇದೀಗ ತಮ್ಮಿಬ್ಬರ ಸ್ನೇಹ ಸಂಬಂಧದ ಬಗೆಗೆ ವಿವರಿಸಿದ ನಟಿ 8 ತಿಂಗಳ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು, ಬಳಿಕ ಸ್ನೇಹ ಬೆಳೆದು ಪ್ರೀತಿ ಹುಟ್ಟಿತ್ತು. ಈಗ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದೇವೆ ಎಂದರು.
ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯ್ತಿಸಿದ್ದ ನಟ್ ಸುಮನ್ ರಂಗನಾಥನ್ ಬಿಂದಾಸ್, ಬುದ್ಧಿವಂತ, ಸಿದ್ಲಿಂಗು, ಸವಾರಿ, ಕಟಾರಿ ವೀರ ಸುರಸುಂದರಾಂಗಿ, ನೀರ್ ದೋಸೆ ಸೇರಿ ಇತ್ತೀಚಿನ ಚಿತ್ರಗಳಲ್ಲಿ ಸಹ ತೆರೆ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


