ಸಿನಿಮಾ ಸುದ್ದಿ

ನಟಿಯಾಗಿ ಇದೇ ಮೊದಲ ಬಾರಿಗೆ ಡಾ. ರಾಜ್ ಕುಟುಂಬದ ಕುಡಿ, ಯಾವ ನಟನ ಮಗಳೀಕೆ ಗೊತ್ತ?

ನಟಸಾರ್ವಭೌಮ ಡಾ. ರಾಜಕುಮಾರ್ ಕುಟುಂಬದಿಂದ ಅದಾಗಲೇ ಇಬ್ಬರು ಮೊಮ್ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಡಾ. ರಾಜ್ ಮೊಮ್ಮಗಳು, ಖ್ಯಾತ ನಟನ ಮಗಳು...

ನಟಿಯಾಗಿ ಇದೇ ಮೊದಲ ಬಾರಿಗೆ ಡಾ. ರಾಜ್ ಕುಟುಂಬದ ಕುಡಿ, ಯಾವ ನಟನ ಮಗಳೀಕೆ ಗೊತ್ತ?
ರಾಜಕುಮಾರ್-ಧನ್ಯಾ
Published On :
ಬೆಂಗಳೂರು: ನಟಸಾರ್ವಭೌಮ ಡಾ. ರಾಜಕುಮಾರ್ ಕುಟುಂಬದಿಂದ ಅದಾಗಲೇ ಇಬ್ಬರು ಮೊಮ್ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಡಾ. ರಾಜ್ ಮೊಮ್ಮಗಳು, ಖ್ಯಾತ ನಟನ ಮಗಳು ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ರಾಮ್ ಕುಮಾರ್ ಮತ್ತು ಪೂರ್ಣಿಮಾ ಮಗಳು ಧನ್ಯಾ ರಾಮ್ ಕುಮಾರ್ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ನಟ ಸೂರಜ್ ಗೌಡ ಜೊತೆ ಧನ್ಯಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇದಕ್ಕೆ ಸಖತ್ ವರ್ಕೌಟ್ ಶುರು ಮಾಡಿರುವ ಧನ್ಯಾ ನೃತ್ಯ, ಫಿಟ್ನೆಸ್, ನಟನೆ ಸೇರಿದಂತೆ ಮುಂತಾದ ತರಬೇತಿ ಪಡೆಯುತ್ತಿದ್ದಾರೆ.
ಚಿತ್ರವನ್ನು ಸುಮನ್ ಜಾದೂಗಾರ್ ನಿರ್ದೇಶಿಸುತ್ತಿದ್ದು ಸೂರಜ್ ಗೌಡ ಚಿತ್ರ ಕಥೆ ಬರೆದಿದ್ದಾರೆ. ಇನ್ನು ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.