ಆರ್. ಚಂದ್ರು ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ?
ಉಪೇಂದ್ರ-ರಚಿತಾ ರಾಮ್ ಸ್ಟಾರ್ ನಟನೆಯ "ಐ ಲವ್ ಯು" ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಆರ್. ಚಂದ್ರು ಗೆ ಭಾರೀ ಆಫರ ಗಳು ಬರುತ್ತಿದೆ.ಇದೀಗ ನಿರ್ದೇಶಕ ಚಂದ್ರು ತಮ್ಮ ಮುಂದಿನ ಯೋಜನೆಗೆ....

Published On :
ಉಪೇಂದ್ರ-ರಚಿತಾ ರಾಮ್ ಸ್ಟಾರ್ ನಟನೆಯ "ಐ ಲವ್ ಯು" ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಆರ್. ಚಂದ್ರು ಗೆ ಭಾರೀ ಆಫರ ಗಳು ಬರುತ್ತಿದೆ.ಇದೀಗ ನಿರ್ದೇಶಕ ಚಂದ್ರು ತಮ್ಮ ಮುಂದಿನ ಯೋಜನೆಗೆ ಸಿದ್ದವಾಗುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಚಂದ್ರು ಮುಂದಿನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಲುತ್ತಿದ್ದು "ಜಂಗಮ" ಎಂದು ಹೆಸರಿಡುವ ಸಾಧ್ಯತೆಗಳಿದೆ.
"ಸೆಂಚುರಿ ಸ್ಟಾರ್ಗೆ ಚಂದ್ರು ಈಗಾಗಲೇ ಒಂನ್ ಲೈನ್ ಸ್ಟೋರಿ ಹೇಳಿದ್ದಾರೆ. ಇದು ವಣ್ಣನ ಆಸಕ್ತಿಯನ್ನು ಸೆಳೆಯಿತು, ಮತ್ತು ಅವರು ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆಂದು ಹೇಳಲಾಗಿದೆ. ನಟ ಲಂಡನ್ನಿಂದ ಹಿಂತಿರುಗಿದ ನಂತರ ನಿರ್ದೇಶಕರು ಶಿವಣ್ಣ ಅವರೊಂದಿಗೆ ಈ ವಿಚಾರವನ್ನು ಇನ್ನಷ್ಟು ಚರ್ಚೆ ನಡೆಸುತ್ತಾರೆಂದು ತಿಳಿದುಬಂದಿದೆ.
ಶಿವಣ್ಣ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಿದ್ದಾರೆ. ಅವರ ಭುಜಕ್ಕೆ ಗಾಯವಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಜುಲೈ 12 ರಂದು ಶಿವಣ್ಣ ಅವರ ಜನ್ಮದಿನದಂದು ನಿರ್ದೇಶಕರು ಚಂದ್ರು-ಶಿವಣ್ಣ ಸಂಯೋಜನೆಯ ಬಗೆಗೆ ಅಧಿಕೃತ ಪ್ರಕಟಣೆ ನೀಡುವ ದ್ದೇಶವಿದೆ ಎನ್ನಲಾಗಿದೆ.
ಮತ್ತೊಂದು ಸುದ್ದಿಯೆಂದರೆ, ಐ ಲವ್ ಯುನಲ್ಲಿ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಅವರನ್ನೇ ಚಂದ್ರು ಜಂಗಮ ಚಿತ್ರಕ್ಕೆ ಸಹ ಸಂಗೀತ ನಿರ್ದೇಶಕರನ್ನಾಗಿ ಮಾಡಲು ಯೋಜಿಸುತ್ತಿದ್ದಾರೆ.
ಶಿವಣ್ಣ ಈಗ ದ್ರೋಣ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ದ್ವಾರಕೀಶ್ ಪಿಕ್ಚರ್ಸ್ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಪಿ ವಾಸು ನಿರ್ದೇಶನದ ಈ ಚಿತ್ರದ ಶೂಟಿಂಗ್ ಮುಗಿದಿದ್ದು ಲಂಡನ್ಗೆ ತೆರಳುವ ಮೊದಲು, ಜಯಣ್ಣ ಕಂಬೈನ್ಸ್ ನಿರ್ಮಿಸಿದ ಎ ಹರ್ಷನ ಭಜರಂಗಿ 2 ಸಹ ಪೂರ್ಣವಾಗಿದೆ.ಶಿವಣ್ಣ ಒಂದೆರಡು ತಿಂಗಳು ಶೂಟಿಂಗ್ನಿಂದ ವಿರಾಮ ತೆಗೆದುಕೊಳ್ಳುತ್ತಾರೆ, ತದನಂತರ ಅವರ ಬಾಕಿ ಇರುವ ಕೆಲಸ ಮುಂದುವರಿಸುವ ಸಾಧ್ಯತೆ ಇದೆ.
ಗಲ್ಲಾಪೆಟ್ಟಿಗೆಯಲ್ಲಿ 100 ದಿನಗಳ ಯಶಸ್ವಿ ಪ್ರದರ್ಶನ ಕಂಡ "ಮೈಲಾರಿ" ನಲ್ಲಿ ನಟ-ನಿರ್ದೇಶಕ ಜೊಡಿ ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಜಂಗಮದೊಂದಿಗೆ ಮತ್ತೆ ಎಲ್ಲವೂ ಅಂದುಕೊಂಡಂತೆ ನಡೆದರೆ ಇದು ಶಿವಣ್ಣ ಅವರೊಂದಿಗೆ ನಿರ್ದೇಶಕರ ಎರಡನೇ ಚಿತ್ರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


