ಸ್ಯಾಂಡಲ್ ವುಡ್ ನಟಿ ನೀತು ಈಗ 'ವಜ್ರಮುಖಿ'!
ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ದೆವ್ವದ ಚಿತ್ರಗಳು ಸಾಕಷ್ಟು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿವೆ ಇದೇ 19ರಂದು ಇನ್ನೊಂದು ದೆವ್ವದ ಚಿತ್ರ ಬಿಡುಗಡೆಯಾಗುತ್ತಿದ್ದು, ಜನಪ್ರಿಯ ನಟಿ ನೀತು ‘ದೆವ್ವ’ವಾಗಿ ಕಾಣಿಸಿಕೊಂಡಿದ್ದಾರೆ

Published On :
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ದೆವ್ವದ ಚಿತ್ರಗಳು ಸಾಕಷ್ಟು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿವೆ ಇದೇ 19ರಂದು ಇನ್ನೊಂದು ದೆವ್ವದ ಚಿತ್ರ ಬಿಡುಗಡೆಯಾಗುತ್ತಿದ್ದು, ಜನಪ್ರಿಯ ನಟಿ ನೀತು ‘ದೆವ್ವ’ವಾಗಿ ಕಾಣಿಸಿಕೊಂಡಿದ್ದಾರೆ
“ಮನುಷ್ಯರಿಗಿರುವಂತೆ ಕಿಚ್ಚು, ಸೇಡು, ಗುರಿ ಎಲ್ಲವೂ ಇರುವ ಪಾತ್ರ ನನ್ನದು ಆದರೆ ಈವರೆಗೂ ನೋಡಿರುವ ನಾಗವಲ್ಲಿ, ಮೋಹಿನಿ, ಅರುಂಧತಿ ಮೊದಲಾದ ದೆವ್ವಗಳಿಗೂ ವಜ್ರಮುಖಿಗೂ ಸಂಬಂಧವಿಲ್ಲ, ವಿಭಿನ್ನ ಕಥಾಹಂದರದಿಂದಾಗಿ ವಿಶೇಷವಾಗಿದೆ” ಎಂದು ನೀತು ಹೇಳಿದ್ದಾರೆ
ಈವರೆಗೂ 39 ಚಿತ್ರಗಳಲ್ಲಿ ನಟಿಸಿರುವ ನೀತು ಅವರಿಗೆ, ವಜ್ರಮುಖಿ 35ನೇ ಚಿತ್ರವಂತೆ ಚಿತಗ್ಹಾರರ್ ಚಿತ್ರಗಳನ್ನು ಇಷ್ಟಪಡುವಂತಹ ಪ್ರೇಕ್ಷಕರನ್ನು ‘ವಜ್ರಮುಖಿ’ ಖಂಡಿತಾ ರಂಜಿಸುತ್ತದೆ ನೋಡುಗರನ್ನು ಹೆದರಿಸಲು ಬೇಕಾದ ತಂತ್ರಗಾರಿಕೆಯ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆ ಎಂದಿದ್ದಾರೆ. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ದೆವ್ವದ ನಗೆಯ ಒಂದು ಝಲಕ್ ತೋರಿಸಿ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


