ಜನರು ರಂಗಿತರಂಗ ಜೊತೆ ಅನುಕ್ತಾ ಸಿನಿಮಾ ಹೋಲಿಸುತ್ತಿದ್ದಾರೆ: ಅಶ್ವತ್ಥ್ ಸ್ಯಾಮ್ಯುಯೆಲ್
ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ...

Published On :
ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ ದೈವಾರಾಧನೆ ಮತ್ತೊಂದೆಡೆ ಮರ್ಡರ್ ಮಿಸ್ಟರಿ ಅವೆರಡನ್ನು ಹೊಂದಿಸಿ ಹೊಸದೊಂದು ಕತೆ ಹೇಳ ಹೊರಟಿರುವ ಚಿತ್ರವೇ ಅನುಕ್ತ.
ರಂಗಿತರಂಗ ಹಾಗೂ ಉಳಿದವರು ಕಂಡಂತೆ ಚಿತ್ರಗಳಂತೆ ಅನುಕ್ತ ಚಿತ್ರದ ಟ್ರೈಲರ್ ಕಾಣಿಸಿಕೊಂಡರು. ಇದು ರೋಚಕವಾದ ಮತ್ತೊಂದು ಕತೆ ಹೇಳಲು ಹೊರಟಿದೆ. ಅನುಕ್ತ ಎಂಬ ಶೀರ್ಷಿಕೆಗೆ ಸಂಸ್ಕೃತದಲ್ಲಿ ‘ಹೇಳಲಾಗದ ಸಂಗತಿ’ ಎಂಬ ಅರ್ಥ ಇದೆ. ಮಂಗಳೂರು ಸಂಸ್ಕೃತಿ ಸಾರುವ ದೈವ ಕೋಲ ಇದರಲ್ಲಿದೆ,
ಅನುಕ್ತ ಡಬಲ್ ಮರ್ಡರ್ ಸ್ಟೋರಿ, ಕಥೆ ನನ್ನ ಸ್ನೇಹಿತ ಬರೆದಿದ್ದು, ಇದೊಂದು ಹಾರರ್ ಸಿನಿಮಾವಾಗಿದೆ ಎಂದು ಹೇಳಿದ್ದಾರೆ.
ಇದರಲ್ಲಿ ನನ್ನ ತಂದೆ ಕೂಡ ಕಥೆ ಬರೆದಿದ್ದಾರೆ, ನನ್ನ ತಾಯಿ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.ದುಬೈನ ಹಲವು ಕ್ರೈಮ್ ಸರಣಿ ಮತ್ತು ಸಿಐಡಿ ಮತ್ತು ಭಯಾನಕ ಸರಣಿಗಳಲ್ಲಿ ಕೆಲಸ ಮಾಡಿದ್ದರು, ನಾನು ಮಂಗಳೂರಿನವನು, ನನಗೆ ಸಿನಿಮಾ ಮಾಡುವಲ್ಲಿ ಆಸಕ್ತಿ ಇತ್ತು, ನಿರ್ಮಾಪರ ಹರೀಶ್ ಬಂಗೇರಾ ಕೂಡ ಕರಾವಳಿ ಭಾಗದವರು ಎಂದು ಅಶ್ವಥ್ ಸ್ಯಾಮ್ಯುಯೆಲ್ ಹೇಳಿದ್ದಾರೆ.
ಸಿನಿಮಾದಲ್ಲಿ ಸಂಪತ್ ಕುಮಾರ್, ಅನು ಪ್ರಭಾಕರ್, ಸಂಗೀತಾ ಭಟ್, ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ತಾಂತ್ರಿಕವಾಗಿ ಇದೊಂದು ದೊಡ್ಡ ಸವಾಲಾಗಿದೆ, ಆದರೆ ಸಿನಿಮಾವನ್ನು ಥಿಯೇಟರ್ ಗೆ ತೆಗೆದುಕೊಂಡು ಹೋಗುವುದು ಬಹಳ ಕಷ್ಟದ ಕೆಲಸ, ಇನ್ನೂ 28 ದಿನಗಳಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ, ಇದು ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಹಾಯ ಮಾಡಲಿದೆ. ಮತ್ತು ನನ್ನ ಮುಂದಿನ ಸಿನಿಮಾಗೆ ಇದು ಸಹಾಯ ಮಾಡಲಿದೆ ಎಂದು ಅಶ್ವಥ್ ತಿಳಿಸಿದ್ದಾರೆ.
ಥ್ರಿಲ್ಲರ್ ಸಿನಿಮಾವಾದ ಅನುಕ್ತ ಕೌಟುಂಬಿಕ ಮನರಂಜನಾ ಸಿನಿಮಾವಾಗಿದೆ, ಇದು ಹೊಸ ತಲೆಮಾರಿನ ಸಿನಿಮಾವಾಗಿದೆ.,ಅನುಪ್ ಭಂಡಾರಿ ಅವರ ರಂಗಿತರಂಗ ಸಿನಿಮಾ ಜೊತೆ ಜನ ಅನುಕ್ತ ಸಿನಿಮಾವನ್ನು ಹೋಲಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


