ಸಿನಿಮಾ ಸುದ್ದಿ

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಸೆಟ್ಟೇರಲಿದೆ ಕನ್ನಡ-ಚೀನಿ ಸಿನಿಮಾ

ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ದೇಶನದಲ್ಲಿ ತೊಡಗಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಮತ್ತೊಂದು ವಿನೂತನ ಸಿನಿಮಾವನ್ನು ಮಾಡಲು ನಿರ್ಧರಿಸಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಸೆಟ್ಟೇರಲಿದೆ ಕನ್ನಡ-ಚೀನಿ ಸಿನಿಮಾ
ರಾಜೇಂದ್ರ ಸಿಂಗ್ ಬಾಬು
Published On :
ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ದೇಶನದಲ್ಲಿ ತೊಡಗಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಮತ್ತೊಂದು ವಿನೂತನ ಸಿನಿಮಾವನ್ನು ಮಾಡಲು ನಿರ್ಧರಿಸಿದ್ದಾರೆ. 
ಕನ್ನಡ-ಚೀನೀ ಭಾಷೆಯಲ್ಲಿ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಲು ರಾಜೇಂದ್ರ ಸಿಂಗ್ ಬಾಬು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಮಾಹಿತಿ ನೀಡಿದ್ದು, ಚೀನಾ ನಿರ್ಮಾಣ ಸಂಸ್ಥೆಯ ಸಹ ನಿರ್ಮಾಣದಲ್ಲಿ ಕನ್ನಡ-ಚೀನಿ ಭಾಷೆಯ ಸಿನಿಮಾ ಭಾರತದಲ್ಲಿ ಚಿತ್ರೀಕರಣವಾಗಲಿದೆ ಎಂದು ಹೇಳಿದ್ದಾರೆ. 
ನನ್ನ ಸ್ನೇಹಿತ ಹಾಗೂ ಶಾಸಕ ಮೋಹನ್ ಕೊಂಡಜ್ಜಿ ಅವರ ಮೂಲಕ ಈ ಸಿನಿಮಾ ತಂಡ ನನಗೆ ಪರಿಚಯವಾಗಿತ್ತು.  ಕೆಲವೇ ದಿನಗಳ ಹಿಂದೆಯಷ್ಟೆ ಎಲ್ಲವೂ ಅಂತಿಮವಾಯಿತು. ಕನ್ನಡ-ಚೀನಿ ಸಿನಿಮಾಕ್ಕಾಗಿ ನಾನು ಚೀನಾಗೆ ತೆರಳಬೇಕಾಗುತ್ತದೆ, ಚೀನಾ ಹಾಗೂ ಕರ್ನಾಟಕದ ಕಲಾವಿದರು ಕನ್ನಡ-ಚೀನಿ ಸಿನಿಮಾದಲ್ಲಿ ನಟಿಸಲಿದ್ದಾರೆ. 
ಚೀನಾದ ದೂತವಾಸ ಕರ್ನಾಟಕ-ಚೀನಾ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶಹೊಂದಿದೆ. ಸಿನಿಮಾ ಯೋಜನೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೂ ಮುನ್ನ ಕೆಲವು ಸ್ರಿಪ್ಟ್ ಸಂಬಂಧಿತ ಕೆಲಸಗಳಿವೆ ಅದು ಪೂರ್ಣಗೊಂಡ ನಂತರ ಪೂರ್ಣವಾಗಿ ಸಿನಿಮಾ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.