ದೊಡ್ಡ ಬಂಡೆಯೊಂದರ ಬೆಣಚುಕಲ್ಲು ನಾನು, ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದೇನೆ: ಸುದೀಪ್
ಐಟಿ ದಾಳಿ ಎಂದರೆ ದೊಡ್ಡ ಬಂಡೆ ಇದ್ದಹಾಗೆ, ಅದರಲ್ಲಿ ನಾನೊಂದು ಬೆಣಚುಕಲ್ಲು. ನಾನು ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದು ನಿಜ, ಮುಂದೆ ಇಂತಹದು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ.....

Published On :
ಬೆಂಗಳೂರು: ಐಟಿ ದಾಳಿ ಎಂದರೆ ದೊಡ್ಡ ಬಂಡೆ ಇದ್ದಹಾಗೆ, ಅದರಲ್ಲಿ ನಾನೊಂದು ಬೆಣಚುಕಲ್ಲು. ನಾನು ಚಿಕ್ಕ ಅಳಿಲಿನಷ್ಟು ತಪ್ಪು ಮಾಡಿದ್ದು ನಿಜ, ಮುಂದೆ ಇಂತಹದು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ ಎಂದು ಸ್ಯಾಂಡಲ್ ವುಡ್ ನಟ ಸುದೀಪ್ ಹೇಳಿದ್ದಾರೆ.
ಚಿತ್ರರಂಗದ ನಿರ್ಮಾಪಕ, ನಟರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬಳಿಕ ಸೋಮವಾರ ಬೆಂಗಳೂರು ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಛೇರಿಗೆ ವಿಚಾರಣೆಗಾಗಿ ಹಾಜರಾಗಿದ್ದ ನಟ ಮಾದ್ಯಮದವರೊಡನೆ ಮಾತನಾಡಿದ್ದಾರೆ.
"ವಿಚಾರಣೆ ಇನ್ನೂ ಮುಗಿದಿಲ್ಲ. 5-6 ತಿಂಗಳು ವಿಚಾರಣೆ ನಡೆಯುವುದಿದೆ. ನನ್ನ ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಹೇಳಿಕೆ ನೀಡಿ ಸಹಿ ಮಾಡಿದ್ದೇನೆ.ಈ ಕುರಿತಂತೆ ಮಾತನಾಡಲು ಅಧಿಕಾರಿಗಳು ನನ್ನನ್ನು ಇಂದು ಇಲ್ಲಿಗೆ ಕರೆದಿದ್ದರು. ನಾನೇನಾದರೂ ನನ್ನ ಹೇಳಿಕೆಯಲ್ಲಿ ಬದಲಾವಣೆ ಮಾಡಲಿದ್ದೇನೆಯೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.
"ವಿಚಾರಣೆ ಇನ್ನೀಗ ಪ್ರಾರಂಭವಾಗಲಿದೆ. ಎಲ್ಲಾ ಪವರ್ ಆಫ್ ಅಟಾರ್ನಿಯನ್ನು ನಾನು ನಮ್ಮ ಆಡಿಟರ್‌ಗೆ ನೀಡಿದ್ದು ಮುಂದಿನ ದಿನಗಳಲ್ಲಿ ಅವರೇ ವಿಚಾರಣೆಗೆ ಹಾಜರಾಗುತ್ತಾರೆ." ನಟ ವಿವರಿಸಿದ್ದಾರೆ.
ಇದು ಐಟಿ ರೇಡ್ ಅಲ್ಲ ಸರ್ಚ್ ಅಷ್ಟೇ ಎಂದ ನಟನಾನೇನೂ ಬೇಕೆಂದು ತಪ್ಪು ಮಾಡಿಲ್ಲ, ಮಾಡಿದ್ದರೆ ಅದು ಅಳಿಲಿನಷ್ಟು ತಪ್ಪು ಮಾಡಿರಬಹುದು. ಆದರೆ ಐಟಿ ಇಲಾಖೆ ಎನ್ನುವ ದೊಡ್ಡ ಬಂಡೆಯಲ್ಲಿ ನಾನೊಂದು ಬೆಣಚುಕಲ್ಲಷ್ಟೇ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹಾ ತಪ್ಪು ಮರುಕಳಿಸದಂತೆ ಎಚರ ವಹಿಸುವುದಾಗಿಯೂ ಸುದೀಪ್ ಹೇಳಿದ್ದಾರೆ.
ಇದೇ ವೇಳೆ ಸುದೀಪ್ ಮುಂದಿನ ಚಿತ್ರ "ಪೈಲ್ವಾನ್ " ಚಿತ್ರೀಕರಣ ಸಾಗಿದ್ದು ನಾಳೆ (ಜನವರಿ 15) ರಂದು ಚಿತ್ರದ ಕನ್ನಡ ಟೀಸರ್ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


