ಸಿನಿಮಾ ಸುದ್ದಿ

ಚೆನ್ನೈನಲ್ಲಿ 'ಪೆಟ್ಟಾ' ಭರ್ಜರಿ ಓಪನಿಂಗ್: ಚಿತ್ರಮಂದಿರದ ಮುಂದೆಯೇ ಸಪ್ತಪದಿ ತುಳಿದ ರಜನಿ ಅಭಿಮಾನಿ!

ಸಂಕ್ರಾಂತಿ ಇನ್ನೇನು ಹತ್ತಿರದಲ್ಲೇ ಇದೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಇಂದೇ ಸಂಕ್ರಾಂತಿ ಹಬ್ಬದ ಸಡಗರ ಪ್ರಾರಂಭ. ಇಂದು ಬಿಡುಗಡೆಯಾಗಿರುವ ರಜನಿ ಅಭಿನಯದ "ಪೆಟ್ಟಾ" ಚಿತ್ರ....

ಚೆನ್ನೈನಲ್ಲಿ 'ಪೆಟ್ಟಾ' ಭರ್ಜರಿ ಓಪನಿಂಗ್: ಚಿತ್ರಮಂದಿರದ ಮುಂದೆಯೇ ಸಪ್ತಪದಿ ತುಳಿದ ರಜನಿ ಅಭಿಮಾನಿ!
ಚಿತ್ರಮಂದಿರದ ಮುಂದೆಯೇ ಸಪ್ತಪದಿ ತುಳಿದ ರಜನಿ ಅಭಿಮಾನಿ!
Published On :
ಚೆನ್ನೈ: ಸಂಕ್ರಾಂತಿ ಇನ್ನೇನು ಹತ್ತಿರದಲ್ಲೇ ಇದೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಇಂದೇ ಸಂಕ್ರಾಂತಿ ಹಬ್ಬದ ಸಡಗರ ಪ್ರಾರಂಭ. ಇಂದು ಬಿಡುಗಡೆಯಾಗಿರುವ ರಜನಿ ಅಭಿನಯದ "ಪೆಟ್ಟಾ" ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಆದರೆ ವಿಷಯ ಇದಷ್ಟೇ ಅಲ್ಲ ರಜನಿಕಾಂತ್ ಅಭಿಮಾನಿಯೊಬ್ಬ ತಮಿಳುನಾಡಿನ ಚೆನ್ನೈ ನಗರದಲ್ಲಿನ ಚಿತ್ರಮಂದಿರದ ಮುಂದೆಯೇ ತಾಳಿ ಕಟ್ಟುವ ಮೂಲಕ ವಿವಾಹ ಮಾಡಿಕೊಂಡಿದ್ದು ಮೇರು ನಟನ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾನೆ.
ಅಂಬಸು, ಕಮಾಚಿ  ಎಂಬ ಯುವ ಜೋಡಿ ರಜನಿ ಅಭಿಮಾನಿಗಳಾಗಿದ್ದು ರಜನಿಕಾಂತ್ ಅಭಿನಯದ ಚಿತ್ರ ಬಿಡುಗಡೆಯಾದ ಮಹೂರ್ತವೇ ತಮಗೆ ಶುಭ ಮಹೂರ್ತ ಎಂದು ಬಗೆದ ಈ ಜೋಡಿ ಚಿತ್ರಮಂದಿರದ ಎದುರೇ ಮದುವೆಯಾಗಿದೆ.
ಚೆನ್ನೈನ ಉಡ್‍ಲ್ಯಾಂಡ್ಸ್ ಥಿಯೇಟರ್  ಮುಂಭಾಗದಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದ್ದು ಅಲ್ಲೇ ಮದುವೆ ಮಂಟಪದ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಶಾಸ್ತ್ರಗಳೆಲ್ಲ ಸಂಪ್ರದಾಯದ ಅನುಸಾರ ನಡೆದವು. ಇನ್ನು ಈ ವಿವಾಹಕ್ಕೆ ರಜನಿ ಅಭಿಮಾನಿಗಳೇ ಬಂಧು, ಬಳಗವಾಗಿದ್ದರು. ಚಿತ್ರ ವೀಕ್ಷಣೆಗೆ ಬಂದವರೆಲ್ಲ ಈ ನವಜೋಡಿಗಳನ್ನು ಹರಸಿ ಆಶೀರ್ವದಿಸಿದ್ದಾರೆ.
ವಿವಾಹದ ಬಳಿಕ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಒಟ್ಟಾರೆ ರಜನಿ  ಮೇಲಿನ ಅಭಿಮ್ನಾನ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ.
ಇನ್ನು ಅನೇಕ ಕಡೆಗಳಲ್ಲಿ ಚಿತ್ರ ವೀಕ್ಷಿಸ ಬಂದ ಚಿತ್ರಪ್ರೇಮಿಗಳಿಗೆ ಪೊಂಗಲ್, ಸಿಹಿ ವಿತರಿಸಿ ಸಂಭ್ರಮಿಸಿರುವುದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.