ಸಿನಿಮಾ ಸುದ್ದಿ

ಇತಿಹಾಸ ನಿರ್ಮಿಸಿದ ಕೆಜಿಎಫ್: ಪಾಕ್ ನಲ್ಲೂ ಪ್ರದರ್ಶನ ಕಂಡ ಮೊಟ್ಟ ಮೊದಲ ಕನ್ನಡ ಅವತರಣಿಕೆ ಚಿತ್ರ

ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಮೂಲಕ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತಿಹಾಸ ನಿರ್ಮಿಸಿದ ಕೆಜಿಎಫ್: ಪಾಕ್ ನಲ್ಲೂ ಪ್ರದರ್ಶನ ಕಂಡ ಮೊಟ್ಟ ಮೊದಲ ಕನ್ನಡ ಅವತರಣಿಕೆ ಚಿತ್ರ
ಪಾಕಿಸ್ತಾನದಲ್ಲಿ ಕೆಜಿಎಫ್ ಹವಾ
Published On :
ಇಸ್ಲಾಮಾಬಾದ್: ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಮೂಲಕ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ  ಪಾಕಿಸ್ತಾನದಲ್ಲೂ ತನ್ನ ಹವಾ ಎಬ್ಬಿಸಿದೆ. ಈ ಮೂಲಕ ಪಾಕಿಸ್ತಾನದಲ್ಲಿ ರಿಲೀಸ್​ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್​ ಪಾತ್ರವಾಗ್ತಿದೆ. ಪಾಕಿಸ್ತಾನದಲ್ಲಿ ಟಿಕೆಟ್​ ಬುಕ್ಕಿಂಗ್​ ಆರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಇಂದಿನಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಇನ್ನು ಪಾಕಿಸ್ತಾನಿಗರಿಗೆ ಭಾರತೀಯ ಸಿನಿಮಾಗಳು ಹೊಸದೇನಲ್ಲ. ಸಾಮಾನ್ಯವಾಗಿ ಹಿಂದಿ ಸಿನಿಮಾಗೆ ದೊಡ್ಡ ಅಭಿಮಾನಿ ಬಳಗ ಪಾಕಿಸ್ತಾನದಲ್ಲಿದೆ. ಪ್ರಮುಖವಾಗಿ ಸಲ್ಮಾನ್‌ಖಾನ್, ಶಾರುಖ್‌ ಖಾನ್ ಸಿನಿಮಾಗಳನ್ನು ಪಾಕಿಸ್ತಾನಿ ಪ್ರಜೆಗಳು ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಪಾಕಿಸ್ತಾನದಲ್ಲಿ ತೆರೆ ಕಂಡಿದೆ. 
ಟ್ರೈಲರ್ ನೋಟಿ ಫಿದಾ ಆಗಿದ್ದ ಪಾಕ್ ಅಭಿಮಾನಿಗಳು
ಇನ್ನು ಕೆಜಿಎಫ್ ಸಿನಿಮಾ ಬಿಡುಗಡೆಗೂ ಮೊದಲೇ ಪಾಕಿಸ್ತಾನದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಟ್ರೈಲರ್‌ ನೋಡಿ ದಂಗಾಗಿದ್ದ ಅಲ್ಲಿನ ಜನ ಕೆಜಿಎಫ್‌ ರಿಲೀಸ್ ಗಾಗಿ ಕಾಯುತ್ತಿದ್ದರು. ಅಲ್ಲೂ ಸಿನಿಮಾದ ಮ್ಯೂಸಿಕ್​, ಡೈಲಾಗ್ ಎಲ್ಲವೂ ಟ್ರೆಂಡ್​ ಸೃಷ್ಟಿಸಿದ್ವು. ಪಾಕಿಸ್ತಾನಿ ಯುವಕನೊಬ್ಬ ‘ಕೆಜಿಎಫ್​ ಟ್ರೈಲರ್’ ನೋಡಿ ‘ಇದೊಂದು ಗ್ರೇಟ್​ ಟ್ರೈಲರ್​’..!. ಮಾಮೂಲಿ ಸಲ್ಮಾನ್​ ಖಾನ್​ ಸಿನಿಮಾ ಇದಲ್ಲ. ಸಲ್ಮಾನ್​ ಸಿನಿಮಾಗೂ ಮೀರಿದ ಸಿನಿಮಾ. ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ’ ಅಂತಾ ಮನಸಾರೆ ಹೊಗಳಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದ. ಈಗ ಕೆಜಿಎಫ್‌ ಪಾಕಿಸ್ತಾನದಲ್ಲಿ ನಾಗಾಲೋಟ ಮುಂದುವರೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.