ಸಿನಿಮಾ ಸುದ್ದಿ

ಜನವರಿ 25ಕ್ಕೆ ಸೀತಾರಾಮ ಕಲ್ಯಾಣ ರಿಲೀಸ್: ಜ.19ಕ್ಕೆ ಮೈಸೂರಿನಲ್ಲಿ ಅದ್ದೂರಿ ಕಾರ್ಯಕ್ರಮ

ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ನಟ ನಿಖಿಲ್ ಕುಮಾರ್‌ ಅಭಿನಯದ ಎರಡನೇ ಚಿತ್ರ "ಸೀತಾರಾಮ ಕಲ್ಯಾಣ' ತೆರೆಗೆ ಬರೋದಕ್ಕೆ ಅಂತೂ ಮುಹೂರ್ತ ನಿಗದಿಯಾಗಿದೆ.

ಜನವರಿ 25ಕ್ಕೆ ಸೀತಾರಾಮ ಕಲ್ಯಾಣ ರಿಲೀಸ್: ಜ.19ಕ್ಕೆ ಮೈಸೂರಿನಲ್ಲಿ ಅದ್ದೂರಿ ಕಾರ್ಯಕ್ರಮ
ಸೀತಾರಾಮ ಕಲ್ಯಾಣ ಪೋಸ್ಟರ್
Published On :
ಬೆಂಗಳೂರು: ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ನಟ ನಿಖಿಲ್ ಕುಮಾರ್‌ ಅಭಿನಯದ ಎರಡನೇ ಚಿತ್ರ "ಸೀತಾರಾಮ ಕಲ್ಯಾಣ' ತೆರೆಗೆ ಬರೋದಕ್ಕೆ ಅಂತೂ ಮುಹೂರ್ತ ನಿಗದಿಯಾಗಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಮುಂಬರುವ ಜನವರಿ. 25ರಂದು "ಸೀತಾರಾಮ ಕಲ್ಯಾಣ' ರಿಲೀಸ್ ಆಗಲಿದೆ. 
ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟ ನಿಖಿಲ್ ಕುಮಾರ್‌ ಅವರಿಗೆ ನಾಯಕಿಯಾಗಿ ರಚಿತಾ ರಾಮ್‌ ಜೋಡಿಯಾಗಿದ್ದಾರೆ. ಉಳಿದಂತೆ ಬಹುಭಾಷಾ ನಟ ಶರತ್‌ ಕುಮಾರ್‌, ರವಿಶಂಕರ್‌, ಮಧುಬಾಲಾ, ಗಿರಿಜಾ ಲೋಕೇಶ್‌, ಜ್ಯೋತಿ ರೈ ಮೊದಲಾದ ಕಲಾವಿದರ ಬೃಹತ್‌ ತಾರಾಗಣವೇ ಚಿತ್ರದಲ್ಲಿದೆ. ಚೆನ್ನಾಂಬಿಕಾ ಫಿಲ್ಮ್ಸ್  ಬ್ಯಾನರ್‌ನಲ್ಲಿ ಅನಿತಾ ಕುಮಾರಸ್ವಾಮಿ ನಿರ್ಮಿಸುತ್ತಿರುವ "ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎ. ಹರ್ಷ  ನಿರ್ದೇಶಿಸಿದ್ದಾರೆ,
ಮೈಸೂರಿನಲ್ಲಿ ಜನವರಿ 19 ರಂದು ಅದ್ದೂರಿಯಾಗಿ ಟ್ರೇಲರ್ ಪ್ರೀ ರಿಲೀಸ್  ಕಾರ್ಯಕ್ರಮ ಆಯೋಜಿಸಲಾಗಿದೆ, ಸುಮಾರು 3 ಲಕ್ಷ ಜನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. 
ಸೀತಾರಾಮ ಕಲ್ಯಾಣ ಸಿನಿಮಾದೆ ಅನೂಪ್ ರೂಬೆನ್ಸ್ ಸಂಗೀತ ನೀಡಿದ್ದಾರೆ,ಇದೊಂದು ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು ಸುಮಾರು 130 ಕಲಾವಿದರು ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.