ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಪುನೀತ್ ರಾಜ್ ಕುಮಾರ್
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ...

ಬೆಂಗಳೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ನಂತರ ಕಳೆದ ತಡರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ.
ನಮ್ಮ ಮನೆಗೆ ಐಟಿ ಅಧಿಕಾರಿಗಳು ಬಂದು ನನ್ನ ಆದಾಯ, ಹೂಡಿಕೆಗಳು, ದಾಖಲೆಗಳ ತಪಾಸಣೆ ಮತ್ತು ಪರಿಶೀಲನೆ ನಡೆಸಿರುವುದು ನಿಜ. ಯಾವುದೇ ಉದ್ಯಮಿ ಅಥವಾ ಕಲಾವಿದನ ಮನೆಗೆ ಐಟಿ ಅಧಿಕಾರಿಗಳು ಬಂದರೆಂದರೆ ಅದು ಅಕೌಂಟ್ ಗೆ ಸಂಬಂಧಪಟ್ಟದ್ದಾಗಿರುತ್ತದೆ. ನಮ್ಮ ಮನೆಗೆ ಬಂದು ಅಕೌಂಟ್ ಗಳ ಮಾಹಿತಿ ಪಡೆದು ಹೋಗಿದ್ದಾರೆ ಎಂದರು.
ಐಟಿ ಅಧಿಕಾರಿಗಳು ಬಂದರೆಂದರೆ ಅಕ್ಕಪಕ್ಕದ ಮನೆಯವರಿಗೆ, ಸಾರ್ವಜನಿಕರಿಗೆ ಹಲವು ಅನುಮಾನಗಳು ಬರುತ್ತವೆ. ಆದರೆ ಇದು ಯಾವುದೂ ಅಲ್ಲ. ಅಧಿಕಾರಿಗಳಿಗೆ ಎಲ್ಲಿಂದಲೋ ಏನೋ ಮಾಹಿತಿ ಸಿಕ್ಕಿರುತ್ತದೆ. ಅದನ್ನು ಆಧರಿಸಿ ನಮ್ಮ ಮನೆಗೆ ಬಂದಿರಬಹುದು ಎಂದು ಹಲವು ಅನುಮಾನಗಳಿಗೆ ಪುನೀತ್ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಈ ಮಧ್ಯೆ ಇಂದು ಸಂಜೆ ಹುಬ್ಬಳ್ಳಿಯಲ್ಲಿ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮದ ಆಡಿಯೊ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ಅದರಲ್ಲಿ ಪುನೀತ್ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


