ಪಾಕ್ ಉಗ್ರರ ಮೇಲೆ ವೈಮಾನಿಕ ದಾಳಿ ಮೇಲೆ ಉರಿ ಟೊರೆಂಟ್ ಡೌನ್ ಲೋಡ್ ಗಾಗಿ ಸಿಕ್ಕಾಪಟ್ಟೆ ಸರ್ಚ್
ಫೆ.26, ಭಾರತ ಪಾಕಿಸ್ತಾನದಲ್ಲಿ ಉಗ್ರರ ಕ್ಯಾಂಪ್ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂಬ ಸುದ್ದಿಯೊಂದಿಗೆ ದೇಶದ ಜನತೆಯ ದಿನ ಪ್ರಾರಂಭವಾಗಿತ್ತು.

Published On :
ನವದೆಹಲಿ: ಫೆ.26, ಭಾರತ ಪಾಕಿಸ್ತಾನದಲ್ಲಿ ಉಗ್ರರ ಕ್ಯಾಂಪ್ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂಬ ಸುದ್ದಿಯೊಂದಿಗೆ ದೇಶದ ಜನತೆಯ ದಿನ ಪ್ರಾರಂಭವಾಗಿತ್ತು.
ದಾಳಿಯಾಗಿರುವ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ದೇಶದ ಜನರಲ್ಲಿ ಸೇನೆಯ ಕುರಿತಾದ ವಿಶ್ವಾಸ ನೂರ್ಮಡಿ ಹೆಚ್ಚಿತ್ತು. ಈ ನಡುವೆಯೇ ಸರ್ಜಿಕಲ್ ಸ್ಟ್ರೈಕ್-1 ರ ಆಧಾರಿತ ಸಿನಿಮಾ ಉರಿ ಚಿತ್ರದ ಟೋರೆಂಟ್ ಡೌನ್ ಲೋಡ್ ಗಾಗಿ ಸಿಕ್ಕಾಪಟ್ಟೆ ಸರ್ಚ್ ಮಾಡಿದ್ದಾರೆ.
ಫೆ.26 ರಂದು ನಡೆದಿದ್ದ ವೈಮಾನಿಕ ಸ್ಟ್ರೈಕ್ ನ್ನು ಸರ್ಜಿಕಲ್ ಸ್ಟ್ರೈಕ್-2 ಎಂದೇ ಬಣ್ಣಿಸಲಾಗುತ್ತಿದ್ದು, ದಾಳಿ ನಡೆದಿರುವುದನ್ನು ಸಂಭ್ರಮಿಸುತ್ತಿರುವ ಭಾರತದ ಜನತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಆದಿತ್ಯ ಧರ್ ನಿರ್ದೇಶನದ ಸರ್ಜಿಕಲ್ ಸ್ಟ್ರೈಕ್-1 ಆಧರಿಸಿದ್ದ ಉರಿ ಚಿತ್ರದ ಟೋಎಂಟ್ ಡೌನ್ ಲೋಡ್ ಗಾಗಿ ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಪ್ರಮಾಣದಲ್ಲಿ ಸರ್ಜ್ ಮಾಡಿದ್ದಾರೆ.
ಇನ್ನು ಉರಿ ಚಿತ್ರದಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ ಯಾಮಿ ಗೌತಮ್ ಸಹ ವೈಮಾನಿಕ ದಾಳಿಯನ್ನು ಸ್ವಾಗತಿಸಿದ್ದು, ಭಾರತೀಯ ವಾಯುಪಡೆ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದೆ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನIAF surgical strikeUri torrent download searchಐಎಎಫ್ ಸರ್ಜಿಕಲ್ ಸ್ಟ್ರೈಕ್ಉರಿ ಟೋರೆಟ್ ಡೌನ್ ಲೋಡ್ ಸರ್ಚ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


