ಐಎಎಸ್ ಅಧಿಕಾರಿಯ ಕಥೆಯನ್ನು ಲಘುವಾಗಿ ಹೇಳಲು ಆಗದು: ಸತೀಶ್ ನೀನಾಸಂ
ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಪಾತ್ರಗಳು ಕಲಾವಿದರ ವ್ಯಕ್ತಿತ್ವವನ್ನು ರೂಪಿಸಲಿವೆ ಎಂದು ಹೇಳಿಕೊಂಡಿದ್ದಾರೆ

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಪಾತ್ರಗಳು ಕಲಾವಿದರ ವ್ಯಕ್ತಿತ್ವವನ್ನು ರೂಪಿಸಲಿವೆ ಎಂದು ಹೇಳಿಕೊಂಡಿದ್ದಾರೆ
ಈ ಪಾತ್ರದ ಮೂಲಕ ಪ್ರೇಕ್ಷಕರು ಭಿನ್ನ ರೀತಿಯಲ್ಲಿ ತಮ್ಮನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇಟ್ಟುಕೊಂಡಿರುವ ಸತೀಶ್ ನೀನಾಸಂ, ನೈಜ ಚಿತ್ರದ ಘಟನಾವಳಿಗಳಿಂದ ನಿರ್ದೇಶಕರು, ಕಥೆಗಾರರ ಚಿಂತನೆಗಳು ಪ್ರೇರಣೆ ಪಡೆದಿವೆ. ಆದಾಗ್ಯೂ, ಪ್ರೇಕ್ಷಕರು ಹೇಗೆ ಸಿನಿಮಾವನ್ನು ಸ್ವೀಕರಿಸುತ್ತಾರೆ ಎಂಬುದು ಬಹುಮುಖ್ಯವಾಗಲಿದೆ ಎನ್ನುತ್ತಾರೆ.
ಜಾಕೋಬ್ ವರ್ಗೀಸ್ ಅಂತಹ ಉತ್ತಮ ನಿರ್ದೇಶಕರು ಚಿತ್ರ ಮಾಡಿದ್ದು, ಐಎಎಸ್ ಅಧಿಕಾರಿಗಳ ಕುರಿತಾದ ಕಥೆಯನ್ನು ಲಘುವಾಗಿ ಹೇಳಲು ಆಗದು. ವಿವಿಧ ಆಯಾಮದಲ್ಲಿ ತೋರಿಸಲಾಗಿದ್ದು, ಚಿತ್ರದಲ್ಲಿ ಅಫೀಸರ್ಸ್ ಆಗಿ ನಟಿಸಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಸೇವೆ ಮಾಡ ಬಯಸುವ ಯುವಕರನ್ನು ಈ ಸಿನಿಮಾ ಆಕರ್ಷಿಸಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


