ಸಿನಿಮಾ ಸುದ್ದಿ

2020ಕ್ಕೆ ರಾಜ್' ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ವುಡ್'ಗೆ ಪಾದಾರ್ಪಣೆ

ವರನಟ ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಬ್ಬ ಸದಸ್ಯರೊಬ್ಬರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗುತ್ತಿದ್ದು, 2020ಕ್ಕೆ ಕೆಜಿಎಫ್ ಸಹ ನಿರ್ದೇಶಕ ಪುನೀತ್ ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಅವರು ಅಭಿನಯಿಸುತ್ತಿದ್ದಾರೆಂದು ತಿಳಿದುಬಂದಿದೆ.

2020ಕ್ಕೆ ರಾಜ್' ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ವುಡ್'ಗೆ ಪಾದಾರ್ಪಣೆ
ಯುವರಾಜ್ ಕುಮಾರ್
Published On :

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಬ್ಬ ಸದಸ್ಯರೊಬ್ಬರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗುತ್ತಿದ್ದು, 2020ಕ್ಕೆ ಕೆಜಿಎಫ್ ಸಹ ನಿರ್ದೇಶಕ ಪುನೀತ್ ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಅವರು ಅಭಿನಯಿಸುತ್ತಿದ್ದಾರೆಂದು ತಿಳಿದುಬಂದಿದೆ. 

ಕೆಜಿಎಪ್ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪುನೀತ್ ಅವರು, ಯುವರಾಜ್ ಕುಮಾರ್ ಜೊತೆಗೆ ಚಿತ್ರವನ್ನು ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. 

ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಡಲು ತರಾತುರಿಯಲ್ಲಿಲ್ಲ. ಉತ್ತಮ ಸಮಯಕ್ಕೆ ಹಾಗೂ ಉತ್ತಮ ವಿಷಯಕ್ಕಾಗಿ ಕಾಯುತ್ತಿದ್ದೆ. ಇದೀಗ ಅಂತಹ ಸ್ಕ್ರಿಪ್ಟ್ ಸಿಕ್ಕಿದ್ದು, ಸಾಕಷ್ಟು ಭೇಟಿ, ಚರ್ಚೆ ಬಳಿಕ ಚಿತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ಯುವರಾಜ್ ಕುಮಾರ್ ಅವರು ಹೇಳಿದ್ದಾರೆ. 

2020ಕ್ಕೆ ಚಿತ್ರ ಸೆಟ್ ಏರಲಿದ್ದು, ಚಿತ್ರಕ್ಕಾಗಿ ಯುವರಾಜ್ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ನಟನಾ ಕಲೆಯ ಎಲ್ಲಾ ಆಯಾಮಗಳನ್ನು ನಿಧಾನಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದು, ತಮ್ಮ ಚಿಕ್ಕಪ್ಪಂದಿರಾದ ಶಿವಣ್ಣಮತ್ತು ಪುನೀತ್ ರೀತೆ ಸ್ಟಾರ್ ಆಗುವ ಕನಸನ್ನು ಯುವರಾಜ್ ಕಾಣುತ್ತಿದ್ದಾರೆ. ಇದಕ್ಕಾಗಿ ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್, ಡ್ಯಾನ್ಸ್, ಫಿಟ್ನೆಸ್ ಕಡೆ ಗಮನ ಹರಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.