ಸಿನಿಮಾ ಬಗ್ಗೆ ಹೆಚ್ಚಿನ ಒಲವು ಅಭಿರುಚಿ ಬರಲು ರಕ್ಷಿತ್ ಶೆಟ್ಟಿ ಕಾರಣ: ಶಾನ್ವಿ ಶ್ರೀವಾತ್ಸವ
ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಗೆ ಕಾಯುತ್ತಿದೆ. ಇದರ ನಡುವೆ ನಾಯಕಿ ಶಾನ್ವಿ ಶ್ರೀವಾತ್ಸವ ಸಿನಿಮಾ ಬಿಡುಗೆಡೆಯಾಗುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಗೆ ಕಾಯುತ್ತಿದೆ. ಇದರ ನಡುವೆ ನಾಯಕಿ ಶಾನ್ವಿ ಶ್ರೀವಾತ್ಸವ ಸಿನಿಮಾ ಬಿಡುಗೆಡೆಯಾಗುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದಾರೆ.
ಕಳೆದ ಬಾರಿ ನನದೆ ಸಂತೋಷ ಮತ್ತು ಭಯ ಉಂಟಾಗಿತ್ತು, ಇಡೀ ತಂಡವೇ ಸಿನಿಮಾಗಾಗಿ ಉತ್ತಮ ಶ್ರಮ ವ್ಯಯಿಸಿದೆ, ಈ ಪ್ರಾಜೆಕ್ಟ್ ಗಾಗಿ ತಂಡ ಕಠಿಣ ಶ್ರಮ ಪಟ್ಟಿದೆ.ನಾನು ಈ ಸಿನಿಮಾ ತಂಡದಲ್ಲಿ ಕೆಸ ಮಾಡುವಾಗ ಕೆಲವು ಅದ್ಬುತ ವ್ಯಕ್ತಿಗಳನ್ನು ಭೇಟಿ ಮಾಡಿದೆ.
ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮಿ ಮತ್ತು ನಾರಾಯಣ ಇಬ್ಬರದ್ದು ಪ್ರಮುಖ ಪಾತ್ರ, ಅವರಿಲ್ಲದೇ ಕಥೆ ನಡೆಯುವುದಿಲ್ಲ, ಆದರೆ ಶ್ರೀ ಮನ್ನಾರಾಯಣ ಸಿನಿಮಾದಲ್ಲಿ ಲಕ್ಷಿ ಕಥೆ ಭಿನ್ನವಾಗಿದೆ, ಸಿನಿಮಾದಲ್ಲಿ ಲಕ್ಷ್ಮಿ ಪಾತ್ರ ಎಷ್ಟಿದೆ ಎಂಬುದು ಗೊತ್ತಿಲ್ಲ ಎಂದು ಶಾನ್ವಿ ತಿಳಿಸಿದ್ದಾರೆ.
ಸಿನಿಮಾದಲ್ಲಿ ನನಗೆ ಲಕ್ಷ್ಮಿಯಂತೆ ನಡೆಯಲು, ಮಾತನಾಡು ಹಾಗೂ ವರ್ತಿಸಲು ನಿರ್ದೇಶಕರು ಹೇಳಿದ್ದರು. ಕಳೆದ ಒಂದೂವರೆ ವರ್ಷದಿಂದ ಈ ಪಾತ್ರದಲ್ಲಿ ಭಾಗಿಯಾಗಿದ್ದೇನೆ, ಹೀಗಾಗಿ ನನ್ನಲ್ಲಿ ಬದಲಾವಣೆಯಗಿದೆ, ನಾನು ವಿಭಿನ್ನವಾದ ವ್ಯಕ್ತಿ ಎಂಬ ಭಾವನೆ ಬರುತ್ತದೆ. ನಾನು ಲಕ್ಷ್ಮಿಯಾಗಿ ತೆರೆಯ ಮಲೆ ಕಾಣಿಸಿಕೊಂಡಿದ್ದೇನೆ,.
ಇದು ನನ್ನ ಅತು ದೊಡ್ಡ ಸಿನಿಮಾ, ವಿಶ್ವ ದರ್ಜೆಯ ಸಿನಿಮ ಆಗಲಿದೆ. ಈ ಸಿನಿಮಾದಿಂದ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ಬರಲಿದೆ, ಕನ್ನಡ ಪ್ರೇಕ್ಷಕರು ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಕರ್ನಾಕದವಲ್ಲದೇ ಭಾರತೀಯ ಚಿತ್ರರಂಗದ ಗಮನ ಸೆಳೆಯಲಿದೆ,
ರಕ್ಷಿತ್ ಶೆಟ್ಟಿ ತನ್ನ ಇಬ್ಬರು ಸ್ನೇಹಿತರ ಬಗ್ಗೆ ಹೆೇಳುತ್ತಿದ್ದರು, ಅವರ ಇಬ್ಬರು ಸ್ನೇಹಿತರ ಸಿನಿಮಾ ಪ್ರೀತಿಯ ಬಗ್ಗೆ ಾತನಾಡಿದ್ದರು. ಸಿನಿಮಾ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ, ಮತ್ತು ಒಲವು ಮೂಡಲು ರಕ್ಷಿತ್ ಶೆಟ್ಟಿ ಕಾರಣವಾಗಿದದ್ದಾರೆ. ಕೆಲಸವನ್ನು ಹೇಗೆ ಪ್ರೀತಿಸುವುದ ಎಂಬುದನ್ನು ಅವರನ್ನು ನೋಡಿ ಕಲಿಯಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


