ಸಿನಿಮಾ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ರಾಜ ವೀರ ಮದಕರಿ ನಾಯಕ'

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ರಾಜ ವೀರ ಮದಕರಿ ನಾಯಕ'
ಸಿನಿಮಾ ಮಹೂರ್ತ
Published On :

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. 

ಡಿಸೆಂಬರ್‌ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು.  ಆದರೆ ಅಂತಿಮವಾಗಿ  ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.

‘ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲರೂ ಹಿರಿಯ ಕಲಾವಿದರು. ಅವರು ಹೇಳಿದಂತೆ ನಾನು ಕೇಳಬೇಕು. ದೊಡ್ಡ ತಂಡ ಕಟ್ಟಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ’ ಎಂದು ದರ್ಶನ್‌ ಖುಷಿ ಹಂಚಿಕೊಂಡರು.

ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಕಥೆ ಚಿತ್ರ ಇದು. ಈ ಚಿತ್ರಕ್ಕಾಗಿ ಚಿತ್ರದುರ್ಗದ ಕೋಟೆಯ ಮರುಸೃಷ್ಟಿಗಾಗಿ ದೊಡ್ಡ ಸೆಟ್‌ ಹಾಕುವ ಸಿದ್ಧತೆಯಲ್ಲಿದೆ ಚಿತ್ರತಂಡ. ಜೊತೆಗೆ, ಹೈದರಾಬಾದ್‌, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಸಲು ಯೋಜಿಸಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.