ಸಿನಿಮಾ ಸುದ್ದಿ

ಹಾಡಿನ ಚಿತ್ರೀಕರಣದತ್ತ ಕೋಟಿಗೊಬ್ಬ 3 ಚಿತ್ರತಂಡ

ರಿಯಾಲಿಟಿ ಶೋ ಜೊತೆ ಜೊತೆಗೆ ಕೋಟಿಗೊಬ್ಬ 3 ಚಿತ್ರೀಕರಣದಲ್ಲಿಯೂ ಕಿಚ್ಚಾ ಸುದೀಪ್ ಕಾರ್ಯಮಗ್ನರಾಗಿದ್ದಾರೆ. ಚಿತ್ರದ ತಂಡ ಚಿತ್ರದ ಕುರಿತು ಯಾವುದೇ ಸುಳುವುಗಳನ್ನು ಬಿಟ್ಟುಕೊಡದೇ ಹೋದರೂ, ಚಿತ್ರದ ಚಿತ್ರೀಕರಣ ಇದೀಗ ಹಾಡಿನತ್ತ ಸಾಗಿದೆ ಎಂದು ತಿಳಿದುಬಂದಿದೆ.

ಹಾಡಿನ ಚಿತ್ರೀಕರಣದತ್ತ ಕೋಟಿಗೊಬ್ಬ 3 ಚಿತ್ರತಂಡ
ಸಂಗ್ರಹ ಚಿತ್ರ
Published On :

ರಿಯಾಲಿಟಿ ಶೋ ಜೊತೆ ಜೊತೆಗೆ ಕೋಟಿಗೊಬ್ಬ 3 ಚಿತ್ರೀಕರಣದಲ್ಲಿಯೂ ಕಿಚ್ಚಾ ಸುದೀಪ್ ಕಾರ್ಯಮಗ್ನರಾಗಿದ್ದಾರೆ. ಚಿತ್ರದ ತಂಡ ಚಿತ್ರದ ಕುರಿತು ಯಾವುದೇ ಸುಳುವುಗಳನ್ನು ಬಿಟ್ಟುಕೊಡದೇ ಹೋದರೂ, ಚಿತ್ರದ ಚಿತ್ರೀಕರಣ ಇದೀಗ ಹಾಡಿನತ್ತ ಸಾಗಿದೆ ಎಂದು ತಿಳಿದುಬಂದಿದೆ. 

ಸುದೀಪ್ ಸೇರಿದಂತೆ ಇನ್ನಿತರೆ ಚಿತ್ರದ ಕೆಲ ಕಲಾವಿದರು ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಚಿತ್ರದ ಚಿತ್ರೀಕರಣ ಇನ್ನು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. 

ಚಿತ್ರದ ತಂಡ ಇದೀಗ ಚಿತ್ರದಲ್ಲಿರುವ ಮೂರು ಹಾಡುಗಳ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಚಿತ್ರೀಕರಣಕ್ಕೆ ಇದೇ ವಾರ ಪಾಂಡಿಚೆರಿಗೆ ತೆರಳಲಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಎರಡು ಹಾಡುಗಳ ಚಿತ್ರೀಕರಣವನ್ನು ಮುಂಬೈ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ. 

ನವ ನಿರ್ದೇಶಕ ಶಿವ ಕಾರ್ತಿಕ ಅವರು ಕೋಟಿಗೊಬ್ಬ3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರತಂಡ ಚಿತ್ರೀಕರಣದಲ್ಲಿ ಕಾರ್ಯಮಗ್ನವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.