ಸಿನಿಮಾ ಸುದ್ದಿ

ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರಕ್ಕೆ ನೀನಾಸಂ ಸತೀಶ್ ಹೀರೋ!

ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಮುಂದಿನ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕನಾಗಿದ್ದು, ಪ್ರಸನ್ನ ಸಿನಿಮಾ ನಿರ್ಮಾಣ ಮಾಡುವುದು ಖಚಿತವಾಗಿದೆ. ಆಗಸ್ಟ್ 28 ರಂದು ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ.

ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರಕ್ಕೆ ನೀನಾಸಂ ಸತೀಶ್ ಹೀರೋ!
ನೀನಾಸಂ ಸತೀಶ್ ಮತ್ತು ವಿಜಯ್ ಪ್ರಸಾದ್
Published On :

ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಮುಂದಿನ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕನಾಗಿದ್ದು, ಪ್ರಸನ್ನ ಸಿನಿಮಾ ನಿರ್ಮಾಣ ಮಾಡುವುದು ಖಚಿತವಾಗಿದೆ. ಆಗಸ್ಟ್ 28 ರಂದು ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ.

ಗಣೇಶ ಮೆಡಿಕಲ್ಸ್ ಎಂಬ ಟೈಟಲ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದರ ಜೊಕತೆಗೆ ಮತ್ತೊಂದು ಕಥೆಯನ್ನು ಸಿದ್ಧಪಡಿಸುತ್ತಿದ್ದು, ಅದರ ಬಗ್ಗೆ ಯಾವ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.  

ವಿಜಯ್ ಪ್ರಸಾದ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ, ಅವರ ಕಥೆ. ಸಂಭಾಷಣೆಯಲ್ಲಿ ಬಿಗಿ ಹಿಡಿತವಿದೆ ಎಂದು ನೀನಾಸಂ ಸತೀಶ್ ಹೇಳಿದ್ದಾರೆ.

ನಿರ್ಮಾಪಕ ಪ್ರಸನ್ನ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಈ ಮೊದಲು ನೀರ್ ದೋಸೆ ಸಿನಿಮಾ ಮಾಡಿದ್ದರು.,ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸತೀಶ್ ಸಹ ನಿರ್ಮಾಪಕನಾಗಿದ್ದಾರೆ,

ವಿಜಯ್ ಪ್ರಸಾದ್ ಸದ್ಯ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ,. ಸತೀಶ್ ಚಂದ್ರ ಮೋಹನ್ ನಿರ್ಮಾಣದ ಬ್ರಹ್ಮಚಾರಿ ಸಿನಿಮಾ ಮುಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.