ಸಿನಿಮಾ ಸುದ್ದಿ

ರೋಚಕ, ಸೈಕಲಾಜಿಕಲ್ ಮನರೂಪ ಪೋಸ್ಟರ್ ಬಿಡುಗಡೆ

ಮನರೂಪ ಸಿನಿಮಾದ ಇತ್ತೀಚಿನ ಪೋಸ್ಟರ್ ರಿಲೀಸ್ ಆಗಿದ್ದು, ದಟ್ಟ ಕಾಡಿನಲ್ಲಿ ರೋಚಕ ಅಲೆದಾಟ, ಕರಡಿ ಗುಹೆ ಹುಡುಕಾಟದ ರೋಚಕತೆ ಜತೆಗೆ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಈ ಚಿತ್ರದ ಪೋಸ್ಟರ್ ಸಾಕಷ್ಟು ಗಮನ

ರೋಚಕ, ಸೈಕಲಾಜಿಕಲ್ ಮನರೂಪ ಪೋಸ್ಟರ್ ಬಿಡುಗಡೆ
ಮನರೂಪ ಪೋಸ್ಟರ್
Published On :

ಮನರೂಪ ಸಿನಿಮಾದ ಇತ್ತೀಚಿನ ಪೋಸ್ಟರ್ ರಿಲೀಸ್ ಆಗಿದ್ದು, ದಟ್ಟ ಕಾಡಿನಲ್ಲಿ ರೋಚಕ ಅಲೆದಾಟ, ಕರಡಿ ಗುಹೆ ಹುಡುಕಾಟದ ರೋಚಕತೆ ಜತೆಗೆ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಈ ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆಯುತ್ತಿದೆ.

ಗುಮ್ಮ ಇಸ್ ವಾಚಿಂಗ್ ಎನ್ನುವ ಉಪ ಶೀರ್ಷಿಕೆಯೊಂದಿಗೆ ಪೋಸ್ಟರ್‌ಬಿಡುಗಡೆ ಯಾಗಿದ್ದು , ಪೋಸ್ಟರ್‌ನಲ್ಲಿರುವ ಐವರು ವ್ಯಕ್ತಿಗಳಲ್ಲೇ ಯಾರೋ ಒಬ್ಬರು ಗುಮ್ಮ ಇರಬಹುದೇ ಅಥವಾ ಇನ್ಯಾರೋ ಬೇರೆ ಇದ್ದಾರೆಯೇ ಎಂಬ ಕುತೂಹಲವನ್ನು ಮೂಡಿಸುತ್ತಿದೆ.

ನಿಗೂಢವಾಗಿಯೇ ಉಳಿದಿರುವ, ಯಾರ ಕಣ್ಣಿಗೂ ಕಂಡಿರದ ಕರಡಿ ಗುಹೆಯನ್ನು ಅನ್ವೇಷಣೆಗೆ ಹೊರಟ ಐವರು ಸ್ನೇಹಿತರು, ದಟ್ಟ ಕಾನನದಲ್ಲಿ ಅವರ ಎದುರು ಅನಾವರಣಗೊಳ್ಳುವ ಮನುಷ್ಯನ ವಿವಿಧ ಮುಖಗಳ ಸುತ್ತ ಈ ಸಿನಿಮಾ ಸಾಗುತ್ತದೆ. 

ಈ ಚಿತ್ರದ ಮುಖ್ಯ ಪಾತ್ರದಾರಿ ಪೋಸ್ಟರ್‌ನಲ್ಲಿದ್ದು ಭಾವನಾತ್ಮಕತೆ ಎದ್ದು ಕಾಣುವಂತಿದೆ. ಇದು ಗುಮ್ಮದ ಅಸ್ತಿತ್ವ ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ಇರುವಿಕೆಯ ಸಾಧ್ಯತೆಯನ್ನು ತೋರಿಸುತ್ತದೆ ಎಂಬುದು ನಿರ್ದೇಶಕರು ಪೋಸ್ಟರ್ ಕುರಿತು ಹೇಳುವ ಮಾತು.

ಸರವಣ ಸಂಗೀತ, ಗೋವಿಂದ್‌ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಸಾಹಿತಿ, ಪತ್ರಕರ್ತ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮನರೂಪ ಚಿತ್ರ ತೆರೆ ಮೇಲೆ ಮೂಡಲಿದೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಷಾ ಬಿಆರ್, ಆರ್ಯನಾ ಮತ್ತು ಶಿವಪ್ರಸಾದ್ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.