ಮುರಿದು ಬಿತ್ತಾ ತಮಿಳು ನಟ ವಿಶಾಲ್ -ನಟಿ ಅನಿಶಾ ರೆಡ್ಡಿ ಮದುವೆ ?
ತಮಿಳು ನಟ ವಿಶಾಲ್ ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು.

ತಮಿಳು ನಟ ವಿಶಾಲ್ ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು.
ಕೆಜಿಎಫ್ ಚಾಪ್ಟರ್ 1 ತಮಿಳು ಆವೃತ್ತಿಯ ವಿತರಕ, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಕಾಲಿವುಡ್ ಹೀರೋ ವಿಶಾಲ್ ಇದೇ ಮಾರ್ಚ್ ತಿಂಗಳ 10ರಂದು ಹೈದರಾಬಾದ್ ಮೂಲದ ಅನಿಷಾ ಅಲ್ಲಾ ರೆಡ್ಡಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಅಂದಿನಿಂದ ಅನಿಷಾ ಸಾಮಜಿಕ ಮಾಧ್ಯಮಗಳಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.
ಆದರೆ ಇದೀಗ ಆ ಫೋಟೋಗಳನ್ನೆಲ್ಲಾ ಅನಿಷಾ ಡಿಲೀಟ್ ಮಾಡಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಜೋಡಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಹಾಗಾಗಿಯೇ ಇವರ ಮದುವೆ ನಿಶ್ಚಿತಾರ್ಥಕ್ಕೇ ನಿಂತು ಹೋಗಿದೆ ಎಂಬ ಮಾತುಗಳು ಕಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ.
ಮಾರ್ಚ್‌ನಲ್ಲಿ ನಡೆದ ನಿಶ್ಚಿತಾರ್ಥ ಸಂದರ್ಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಟರ್ಕಿಗೂ ಈ ಜೋಡಿ ಹೋಗಿಬಂದಿತ್ತು.
ವಿಶಾಲ್ ಮತ್ತು ತಮನ್ನಾ ತಾರಾಗಣದ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದಾಗ ಅನಿಷಾರನ್ನೂ ವಿಶಾಲ್ ಅಲ್ಲಿಗೆ ಕರೆದೊಯ್ದಿದ್ದರು. ಇದೀಗ ಈ ಜೋಡಿ ದೂರವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು ಈ ಬಗ್ಗೆ ವಿಶಾಲ್ ಆಗಲಿ ಅನಿಶಾ ಆಗಲಿ ಪ್ರತಿಕ್ರಿಯಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


