ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ 'ಕುರುಕ್ಷೇತ್ರ' ಮೊದಲ ನಾಲ್ಕು ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಡಿಬಾಸ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.

ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ 'ಕುರುಕ್ಷೇತ್ರ' ಮೊದಲ ನಾಲ್ಕು ದಿನದ ಕಲೆಕ್ಷನ್ ಎಷ್ಟು ಗೊತ್ತಾ?
Published On :

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಡಿಬಾಸ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.

ದರ್ಶನ್ ಪ್ರಭಾವಳಿ ಹಾಗೂ ವಾಣಿಜ್ಯಾತ್ಮಕ ಅಂಶಗಳನ್ನು ಇಟ್ಟುಕೊಂಡು ಮಹಾಭಾರತದ  ಯುದ್ಧ ಆಧಾರಿತ ಚಿತ್ರವಾಗಿರುವ ಕುರುಕ್ಷೇತ್ರ ಜನಮನ್ನಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮೊದಲ ನಾಲ್ಕು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡುವ ಮೂಲಕ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.

ಕೆಸಿಎನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ನಿರ್ಮಿಸಿ ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಷ್, ವಿ. ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸೋನು ಸೋದ್, ಡ್ಯಾನಿಷ್ ಅಖ್ತರ್ ಸಫಿ, ನಿಖಿಲ್ ಕುಮಾರ್, ಮೇಘನ ರಾಜ್,  ಶ್ರೀನಿವಾಸ್ ಮೂರ್ತಿ  ಮತ್ತಿತರರ  ದಂಡೇ ಇದೆ.

ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಈ ಚಿತ್ರ ಅಂದು 8. 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಎರಡನೇ ದಿನವಾದ ಶನಿವಾರ 7.30 ಕೋಟಿ, ಮೂರನೇ ದಿನವಾದ ಭಾನುವಾರ 8.70 ಕೋಟಿ ಭರ್ಜರಿ ಮೊತ್ತ ಕಲೆ ಹಾಕಿದೆ. ಸೋಮವಾರ ಬಕ್ರೀದ್ ಹಬ್ಬವಾದರಿಂದ ಅಂದು ಕೂಡಾ ಸುಮಾರು 5.30 ಕೋಟಿ ರೂಪಾಯಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಬಿಡುಗಡೆಯಾದ ಮೊದಲ ನಾಲ್ಕು ದಿನದಲ್ಲಿ 29. 50 ಕೋಟಿ ರೂಪಾಯಿಯನ್ನು ಕುರುಕ್ಷೇತ್ರ ಬಾಚಿಕೊಂಡಿದೆ.

ತೆಲುಗು ಆವೃತ್ತಿಯಲ್ಲಿ 0.80 ವಿದೇಶಗಳಲ್ಲಿ 1.50 ಕೋಟಿ ಸೇರಿದಂತೆ ದೇಶಾದ್ಯಂತ ಒಟ್ಟಾರೇ 34. 80 ಕೋಟಿ ರೂಪಾಯಿಯನ್ನು ಕುರುಕ್ಷೇತ್ರ ಕಲೆಕ್ಷನ್ ಮಾಡಿದೆ. 75 ಕೋಟಿ ರೂ. ಬಜೆಟ್ ನ  ಈ ಚಿತ್ರ ಆಗಸ್ಟ್ 15 ರ ನಂತರ ಕಾಲಿವುಡ್ ಹಾಗೂ ಮಾಲಿವುಡ್ ನಲ್ಲೂ ಬಿಡುಗಡೆಯಾಗುತ್ತಿದ್ದು, 100 ಕೋಟಿ ಕ್ಲಬ್  ಸೇರುವ ಸಾಧ್ಯತೆ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.