ಸಿನಿಮಾ ಸುದ್ದಿ

'ಹಿರೋ' ತೆಲುಗು ಚಿತ್ರದಲ್ಲಿ ವಿಜಯದೇವರಕೊಂಡ ಜೊತೆಗೆ ದಿಗಂತ್ ಅಭಿನಯ

2008ರಲ್ಲಿ ಬಿಡುಗಡೆಗೊಂಡಿದ್ದ ಮುಂಗಾರು ಮಳೆ ತೆಲುಗು ರೀಮೆಕ್ ವಾನ ಚಿತ್ರದಲ್ಲಿ ಪೋಷಕ ಪಾತ್ರ ಕಾಣಿಸಿಕೊಂಡಿದ್ದ ದಿಗಂತ್ ದಶಕದ ನಂತರ ಮತ್ತೆ ಟಾಲಿವುಡ್ ಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಎ

'ಹಿರೋ' ತೆಲುಗು ಚಿತ್ರದಲ್ಲಿ ವಿಜಯದೇವರಕೊಂಡ ಜೊತೆಗೆ ದಿಗಂತ್ ಅಭಿನಯ
ದಿಗಂತ್, ವಿಜಯ್ ದೇವರ ಕೊಂಡ
Published On :

ಬೆಂಗಳೂರು: 2008ರಲ್ಲಿ ಬಿಡುಗಡೆಗೊಂಡಿದ್ದ ಮುಂಗಾರು ಮಳೆ ತೆಲುಗು ರೀಮೆಕ್ ವಾನ ಚಿತ್ರದಲ್ಲಿ ಪೋಷಕ ಪಾತ್ರ ಕಾಣಿಸಿಕೊಂಡಿದ್ದ ದಿಗಂತ್  ದಶಕದ ನಂತರ ಮತ್ತೆ ಟಾಲಿವುಡ್ ಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಎರಡನೇಯ ತೆಲುಗು ಚಿತ್ರ ಹಿರೋದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.

ಬೈಕ್ ರೈಸ್ ನಲ್ಲಿ ದಿಗಂತ್ ಗೆ ಇರುವ  ಆಸಕ್ತಿಯನ್ನು ಗುರುತಿಸಿರುವ  ಕಾಕಾ ಮಟೈ ಸಂಭಾಷೆಗಾರ ಅನಂದ್ ಅಣ್ಣಾಮಲೈ   ಚಿತ್ರದಲ್ಲೂ ಅದನ್ನು ತೋರಿಸಲು ಮಾರ್ಗದರ್ಶನ ನೀಡಿದ್ದಾರೆ.

ಮೇ ತಿಂಗಳಿನಿಂದ ಹಿರೋ ಚಿತ್ರದ  ಚಿತ್ರೀಕರಣ ಆರಂಭವಾಗಲಿದೆ.  ಈ ತಿಂಗಳ ಮಧ್ಯಭಾಗದಲ್ಲಿ ರೇಸ್ ಟ್ರಕ್ ಚಿತ್ರೀಕರಣ ದೆಹಲಿಯಲ್ಲಿ ನಡೆಯಲಿದೆ.  ಆದಾಗ್ಯೂ, ದಿಗಂತ್ ಅವರ ಪಾತ್ರದ ಬಗ್ಗೆ ಪ್ರೊಢಕ್ಷನ್ ಹೌಸ್ ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಾಲಿನಿ ಪಾಂಡೆ ಹಾಗೂ ಮಾಳವಳಿಕಾ ಮೋಹನ್ ಹಿರೋಯಿನ್ ಗಳಾಗಿದ್ದು, ಬಹುಭಾಷೆಗಳಲ್ಲಿ ಚಿತ್ರ  ಬಿಡುಗಡೆ ಆಗಲಿದೆ ಎಂಬುದು ತಿಳಿದುಬಂದಿದೆ.

ಕನ್ನಡದಲ್ಲಿ ಟಿ ಆರ್ ಚಂದ್ರಶೇಖರ್ ನಿರ್ಮಾಣದ ಹುಟ್ಟುಹಬ್ಬದ ಶುಭಾಶಯಗಳು ಚಿತ್ರಕ್ಕೆ ದಿಗಂತ್ ಸಹಿ  ಹಾಕಿದ್ದಾರೆ. ಹಾಸ್ಯ , ಥ್ರಿಲ್ಲರ್ ಸಿನಿಮಾದ ಚಿತ್ರೀಕರಣ ಮೇ ಮೊದಲ ವಾರದಿಂದ ಆರಂಭಗೊಳ್ಳಲಿದೆ ಎಂಬುದು ತಿಳಿದುಬಂದಿದೆ.
ಈ ಮಧ್ಯೆ ಬಾಲಿವುಡ್ ಚಿತ್ರ ರಾಮ್ ಯಂಗ್ ಚಿತ್ರದ ಬಿಡುಗಡೆಗತ್ತ ದಿಗಂತ್ ದೃಷ್ಟಿ ಹರಿಸಿದ್ದಾರೆ. ರಾಮಾಯಣ ಕಥೆಯಾಧಾರಿಸಿದ ಚಿತ್ರದಲ್ಲಿ ದಿಗಂತ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್ ಪ್ರೋಢಕ್ಷನ್ ಹಂತದಲ್ಲಿ ಈ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.