ಸಿನಿಮಾ ಸುದ್ದಿ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಜೆಪಿಗೆ?

ತುಪ್ಪದ ಬೆಡಗಿ ಎಂದೇ ಖ್ಯಾತವಾಗಿರುವ ಕನ್ನಡ ಹೆಸರಾಂತ ನಟಿ ರಾಗಿಣಿ ದ್ವಿವೇದಿ ಬಿಜೆಪಿಗೆ ಸೇರಲಿದ್ದಾರೆಯೆ?

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಜೆಪಿಗೆ?
ರಾಗಿಣಿ ದ್ವಿವೇದಿ
Published On :
ಬೆಂಗಳೂರು: ತುಪ್ಪದ ಬೆಡಗಿ ಎಂದೇ ಖ್ಯಾತವಾಗಿರುವ ಕನ್ನಡ ಹೆಸರಾಂತ ನಟಿ ರಾಗಿಣಿ ದ್ವಿವೇದಿ ಬಿಜೆಪಿಗೆ ಸೇರಲಿದ್ದಾರೆಯೆ? ಲೋಕಸಭೆ ಚುನಾವಣೆ ಮತದಾನದ ದಿನ ಹತ್ತಿರವಾಗಿರುವಾಗಲೇ ನಟಿ ರಾಗಿಣಿ ಬಿಜೆಪಿಗೆ ಸೇರಲಿದ್ದಾರೆ, ಈ ಮೂಲಕ ಅವರು ರಾಜಕೀಯ ರಂಗ ಪ್ರವೇಶಿಸಲಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.
ಕಳೆದ ವಾರ ನಟಿ ರಾಗಿಣಿ ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರಳೀಧರರಾವ್ ಅವರನ್ನು ಭೇಟಿಯಾಗಿದ್ದರು.ಅವರ ಮುಖೇನ ರಾಗಿಣಿ ರಾಜಕೀಯಕ್ಕೆ ಬರುತ್ತಿದ್ದಾರೆ.
ಇಂದು (ಭಾನುವಾರ) ರಾಗಿಣಿ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರದಿಂಡ ಇಂದು ಆ ಕಾರ್ಯಕ್ರಮ ನಡೆಯುತ್ತಿಲ್ಲ, ಆದರೆ ಅತಿ ಶೀಘ್ರದಲ್ಲಿ ನಟಿ ಬಿಜೆಪಿಗೆ ಸೇರಿಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಸ್ಟಾರ್ ನಟಿಯನ್ನು ಪಕ್ಷಕೆ ಸೇರಿಸಿಕೊಳ್ಳುವ ಮೂಲಕ ಮತ್ಗಳನ್ನು ಸೆಳೆಯಲು ಕಮಲ ಪಾಳಯ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ನಟಿ ರಾಗಿಣಿ "ತಾನಿನ್ನೂ ಯಾವ ನಿರ್ಧಾರಕ್ಕೆ ಬಂದಿಲ್ಲ, ರಾಜಕೀಯ ಪ್ರವೇಶದ ಬಗ್ಗೆ ಚಿಂತನೆ ನಡೆಸಿದ್ದೇನೆ ಅಷ್ಟೇ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.