ಶೂಟಿಂಗ್ ವೇಳೆ ಅವಘಡ: 'ಮರಿ ಟೈಗರ್' ಖ್ಯಾತಿಯ ವಿನೋದ್ ಪ್ರಭಾಕರ್‌ಗೆ ಗಾಯ
"ಮರಿ ಟೈಗರ್" ಖ್ಯಾತಿಯ ನಟ ವಿನೋದ್ ಪ್ರಬಾಕರ್ ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವಿನೋದ್ ಪ್ರಭಾಕರ್ ತಮ್ಮ ಮುಂದಿನ ಚಿತ್ರ 'ವರದ’ ಚಿತ್ರೀಕರಣದ ವೇಳೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

Published On :
ಬೆಂಗಳೂರು: "ಮರಿ ಟೈಗರ್" ಖ್ಯಾತಿಯ ನಟ ವಿನೋದ್ ಪ್ರಬಾಕರ್ ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವಿನೋದ್ ಪ್ರಭಾಕರ್ ತಮ್ಮ ಮುಂದಿನ ಚಿತ್ರ 'ವರದ’ ಚಿತ್ರೀಕರಣದ ವೇಳೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಬುಧವಾರ ಬೆಳಿಗ್ಗೆ ನಿಂದ ಉದಯ್ ಪ್ರಕಾಶ್ ನಿರ್ದೇಶನದ "ವರದ" ಚಿತ್ರದಲ್ಲಿ ಭಾವ್ಗವಹಿಸಿದ್ದರು. ಸಾಹಸ ದೃಶ್ಯದಲ್ಲಿ ಪಾಲ್ಗೊಂಡಿದ್ದ ನಟ ಸ್ಟಂಟ್ ಮಾಡುವ ವೇಳೆ ಕಾಲು ಸ್ಲಿಪ್ ಆಗಿ ಬಿದ್ದಿದ್ದಾರೆ. ವಿನೋದ್ ಅವರ ಕಾಲಿನ ಮೂಳೆ ಮುರಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಟಿಂಬರ್‍ಯಾರ್ಡ್‍ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.ಗಾಯಗೊಂಡಿರುವ ನಟ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಐದು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಕಳೆದ ಶುಕ್ರವಾರ ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರ ತೆರೆ ಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


