ಜಗ್ಗೇಶ್ ಅಭಿನಯದ 'ತೋತಾಪುರಿ' ಚಿತ್ರಕ್ಕೆ ಆದಿತಿ ಪ್ರಭುದೇವ ನಾಯಕಿ?
ನೀರ್ ದೋಸೆ ಖ್ಯಾತಿಯ ಜೋಡಿ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಮತ್ತೆ ಒಂದಾಗಿದ್ದು ಈ ಜೋಡಿ ತೋತಾಪುರಿ ಚಿತ್ರದಲ್ಲಿ ಬ್ಯುಸಿಯಾಗಿದೆ...

Published On :
ನೀರ್ ದೋಸೆ ಖ್ಯಾತಿಯ ಜೋಡಿ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಮತ್ತೆ ಒಂದಾಗಿದ್ದು ಈ ಜೋಡಿ ತೋತಾಪುರಿ ಚಿತ್ರದಲ್ಲಿ ಬ್ಯುಸಿಯಾಗಿದೆ.
ಅದಾಗಲೇ ತೋತಾಪುರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣಕ್ಕೂ ಮುನ್ನ ನಾಯಕಿ ಅಂತಿಮಗೊಳಿಸುವ ಯೋಜನೆಯಲ್ಲಿದೆ ಚಿತ್ರತಂಡ.
ಚಿತ್ರದ ನಾಯಕಿಯಾಗಿ ಕಾವ್ಯಾ ಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ನಿರ್ದೇಶಕರು ಆದಿತಿ ಪ್ರಭುದೇವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಅದಾಗಲೇ ಚಿತ್ರಕ್ಕಾಗಿ ಹಲವು ನಾಯಕಿಯರ ಆಡಿಷನ್ ನಡೆಸಿದ್ದು ಇನ್ನು ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ನಾಗಕನ್ನಿಕೆ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ಆದಿತಿ ಅದಾಗಲೇ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ರಘು ಶಿವಮೊಗ್ಗ ನಿರ್ದೇಶನದ ಕುಸ್ತಿ ಹಾಗೂ ಆಪರೇಷನ್ ನಕ್ಷತ್ರ ಚಿತ್ರಗಳಿಗೂ ಆದಿತಿ ಸಹಿ ಮಾಡಿದ್ದಾರೆ.
ತೋತಾಪುರಿ ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದು ಕೆಎ ಸುರೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodಜಗ್ಗೇಶ್Jaggeshವಿಜಯ್ ಪ್ರಸಾದ್ಸ್ಯಾಂಡಲ್ವುಡ್VijayaprasadAditi Prabhudevaಅದಿತಿ ಪ್ರಭುದೇವKA SureshತೋತಾಪುರಿTotapuriಕೆಎಸ್ ಸುರೇಶ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


