ಸಿನಿಮಾ ಸುದ್ದಿ

ನವ ನಿರ್ದೇಶಕನ ಕನಸಿಗೆ ಸಾಥ್ ನೀಡಿದ ಕ್ರೇಜಿಸ್ಟಾರ್ ಪುತ್ರ ಮನೋರಂಜನ್

ನವ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಿರ್ದೇಶಕರ ಕನಸು ಸಾಕಾರಗೊಳ್ಳಲು ಸಹಕರಿಸುತ್ತಿರುವ ಮನೋರಂಜನ್ ರವಿಚಂದ್ರನ್ ಇದೀಗ ಮತ್ತೊಬ್ಬ ನವ ನಿರ್ದೇಶಕನ...

ನವ ನಿರ್ದೇಶಕನ ಕನಸಿಗೆ ಸಾಥ್ ನೀಡಿದ ಕ್ರೇಜಿಸ್ಟಾರ್ ಪುತ್ರ ಮನೋರಂಜನ್
ಮನೋರಂಜನ್
Published On :
ನವ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಿರ್ದೇಶಕರ ಕನಸು ಸಾಕಾರಗೊಳ್ಳಲು ಸಹಕರಿಸುತ್ತಿರುವ ಮನೋರಂಜನ್ ರವಿಚಂದ್ರನ್ ಇದೀಗ ಮತ್ತೊಬ್ಬ ನವ ನಿರ್ದೇಶಕನ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. 
ನವ ನಿರ್ದೇಶಕ ಮನು ಎಂಬುವರು ಮುಂದಿನ ನಿಲ್ದಾಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಮನು ಸ್ವತಂತ್ರ ನಿರ್ದೇಶಕರಾಗುವ ಮೊದಲು ಸಂಭಾಷಣೆ, ಕಥೆ ಮತ್ತು ಚಿತ್ರಕಥೆ ಬರೆಯುತ್ತಿದ್ದರು. 
ಮನೋರಂಜನ್ ಸದ್ಯ ನವ ನಿರ್ದೇಶಕರ ಚಿಲ್ಲುಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಮುಂದಿನ ನಿಲ್ದಾಣ ಚಿತ್ರಕ್ಕೂ ಸಹಿ ಮಾಡಿದ್ದಾರೆ. 
ಮುಂದಿನ ನಿಲ್ದಾಣ ಚಿತ್ರವನ್ನು ಮನು ಸಹೋದರ ಜಗದೀಶ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಮೈಸೂರು, ಬಳ್ಳಾರಿ ಚಿಕ್ಕಮಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.