ಸಿನಿಮಾ ಸುದ್ದಿ

'ಚಿಟ್ಟಿ ಇಸ್ ಬ್ಯಾಕ್': ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್ ಬಿಡುಗಡೆ

ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಜಂಟಿಯಾಗಿ ಮೊದಲ ಬಾರಿಗೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 2.0 ಚಿತ್ರ ಟೀಸರ್ ಗುರುವಾರ ಬಿಡುಗಡೆಯಾಗಿದೆ...

'ಚಿಟ್ಟಿ ಇಸ್ ಬ್ಯಾಕ್': ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್ ಬಿಡುಗಡೆ
'ಚಿಟ್ಟಿ ಇಸ್ ಬ್ಯಾಕ್': ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್ ಬಿಡುಗಡೆ
Published On :
ಮುಂಬೈ: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಜಂಟಿಯಾಗಿ ಮೊದಲ ಬಾರಿಗೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 2.0 ಚಿತ್ರ ಟೀಸರ್ ಗುರುವಾರ ಬಿಡುಗಡೆಯಾಗಿದೆ. 
ಗಣೇಶ ಚತುರ್ಥಿಯಾದ ಇಂದು ಚಿತ್ರದ ತಂಡ ಬಹುಕೋಟಿ ವೆಚ್ಚ 2.0 ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆಯನ್ನು ನೀಡಿದೆ. 
ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. 
2010ರಲ್ಲಿ ಶಂಕರ್ ಅವರೇ ನಿರ್ದೇಶಿಸಿದ್ದ ಎಂದಿರನ್ ಚಿತ್ರ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮುಂದುವರೆದ ಭಾಗವಾಗಿ 2.0 ಮೂಡಿಬಂದಿದೆ. 
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್ ನಲ್ಲಿ ಗಾಣಿಸಿಕೊಂಡಿದ್ದಾರೆ. ರೋಬೋಟ್ ಪಾತ್ರದಲ್ಲಿ ನಾಯಕ ರಜನಿಕಾಂತ್ ಅವರು ಮಿಂಚಿದ್ದು, ಎಂದಿನಂತೆ ಈ ಚಿತ್ರದಲ್ಲಿಯೂ ತಮ್ಮ ಸ್ಟೈಲ್ ತೋರಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.