ನಾನು ಹೀರೋಯಿನ್ ಆಗಲು ಬಂದಿಲ್ಲ, ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು: ಶೀತಲ್ ಶೆಟ್ಟಿ
ಹಿಂದೆ ಕನ್ನಡದ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಇಂದು ಪೂರ್ಣ ಪ್ರಮಾಣದಲ್ಲಿ ...

ಹಿಂದೆ ಕನ್ನಡದ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಇಂದು ಪೂರ್ಣ ಪ್ರಮಾಣದಲ್ಲಿ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ಚಿತ್ರ ಪತಿಬೇಕು.ಕಾಂ ಸಿನಿಮಾದಲ್ಲಿ ಪ್ರಮುಖ ಪಾತ್ರ ಅವರದ್ದೇ. ಉಳಿದವರು ಕಂಡಂತೆ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ನಟನೆ ಆರಂಭಿಸಿದ ಶೀತಲ್ ಶೆಟ್ಟಿಗೆ ಈ ಚಿತ್ರ ಒಳ್ಳೆಯ ಹೆಸರು ನೀಡಬಹುದು ಎಂಬ ವಿಶ್ವಾಸವಿದೆಯಂತೆ.
''ನಾನು ಸಿನಿಮಾ ನಟನೆಗೆ ಬಂದದ್ದು ಆಕಸ್ಮಿಕವಾಗಿ. ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದಾಗ ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಆ ಸಮಯದಲ್ಲಿ ನಾನು ಪತ್ರಕರ್ತೆಯಾಗಿ ಉಳಿಯಲು ಬಯಸಿದ್ದೆ. ಕೊನೆಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಾಗ ಏಕೆ ಒಂದು ಬಾರಿ ಪ್ರಯತ್ನಿಸಬಾರದು ಎನಿಸಿತು. ಅದರಲ್ಲಿ ನಟಿಸಿದ್ದಕ್ಕೆ ನನಗೆ ಉತ್ತಮ ಪ್ರಶಂಸೆ ಸಿಕ್ಕಿತು'' ಎನ್ನುತ್ತಾರೆ ಶೀತಲ್.
ನಾನಿಲ್ಲಿ ಹೀರೋಯಿನ್ ಆಗಲು ಬಂದಿಲ್ಲ. ಯಾಕೆಂದರೆ ಅದಕ್ಕೆ ನಾನು ಹೊಂದಿಕೆಯಾಗುವುದಿಲ್ಲ ಎಂದು ಗೊತ್ತಿದೆ. ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂದು ನಾನು ಶ್ರಮ ಹಾಕುತ್ತಿದ್ದೇನೆ ಎಂದರು.
ಪತಿಬೇಕು. ಕಾಂ ಮ್ಯಾಟ್ರಿಮೋನಿಯಲ್ ಸೈಟ್ ಗಳ ಸುತ್ತ ಹೆಣೆದ ಕಥೆಯಾಗಿದೆ. ಪ್ರತಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಡುಗಿಗೆ ಗಂಡು ಹುಡುಕುವಾಗ ಆಗುವ ಪರದಾಟಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಸುಮಾರು 20ರ ವಯಸ್ಸಿನ ಹುಡುಗಿಗೆ ಆಕೆಯ ಪೋಷಕರು ಮದುವೆ ಮಾಡಲು ಮುಂದಾದಾಗ ಆಕೆ ಪತಿಬೇಕು.ಕಾಂ ವೆಬ್ ಸೈಟ್ ನಲ್ಲಿ ಹುಡುಗನನ್ನು ಹುಡುಕಲು ಪ್ರಯತ್ನಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಗೆ ಎದುರಾಗುವ ಪರಿಸ್ಥಿತಿಗಳು ಮತ್ತು ಸವಾಲುಗಳು ತಮಾಷೆಯ ಮೂಲಕ ಸಾಗುತ್ತವೆ, ಜೀವನ ಮತ್ತು ಮದುವೆ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ ಎನ್ನುತ್ತಾರೆ ಶೀತಲ್.
ಪತಿಬೇಕು.ಕಾಂನಲ್ಲಿ ಅರು ಗೌಡ, ಸಲ್ಮಾನ್, ಹರಿಣಿ, ಕೃಷ್ಣ ಅಡಿಗ ನಟಿಸಿದ್ದಾರೆ. ಹರ್ಷ ಅವರ ಸಂಗೀತ ಮತ್ತು ಯೋಗಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


