ಸಿನಿಮಾ ಸುದ್ದಿ

ಮಹಿಳಾ ಕೇಂದ್ರಿತ ಕಥಾನಕ 'ಅನುಷ್ಕಾ' ಗಾಗಿ ರಾಜಕುಮಾರಿ ಆದ ಅಮೃತಾ!

ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ನಾಯಕಿ ಅಮೃತಾ ಈ ಚಿತ್ರಕ್ಕೆ ಮುನ್ನ "ಅನುಷ್ಕಾ" ಎನ್ನುವ ಮಹಿಳಾ ಕೇಂದ್ರಿತ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಲ್ಳುತ್ತಿದ್ದಾರೆ.

ಮಹಿಳಾ ಕೇಂದ್ರಿತ ಕಥಾನಕ 'ಅನುಷ್ಕಾ' ಗಾಗಿ ರಾಜಕುಮಾರಿ ಆದ ಅಮೃತಾ!
ಅಮೃತಾ
Published On :
ಬೆಂಗಳೂರು: "ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ನಾಯಕಿ ಅಮೃತಾ ಈ ಚಿತ್ರಕ್ಕೆ ಮುನ್ನ "ಅನುಷ್ಕಾ" ಎನ್ನುವ ಮಹಿಳಾ ಕೇಂದ್ರಿತ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಲ್ಳುತ್ತಿದ್ದಾರೆ. 
ದೇವರಾಜ್ ನಿರ್ದೇಶನದ "ಅನುಷ್ಕಾ" ಚಿತ್ರೀಕರಣ ಇದಾಗಲೇ ಪೂರ್ಣಗೊಂಡಿದ್ದು ಇದರಲ್ಲಿ ಅಮೃತಾ ಎರಡು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದರಲ್ಲಿ ಒಂದು ಹಳೆಯ ಕಥೆಯಾಗಿದ್ದರೆ ಇನ್ನೂಂದು ವರ್ತಮಾನಕ್ಕೆ ಸಂಬಂಧಿಸಿದೆ.
"ಪುನರ್ಜನ್ಮದ ಕುರಿತ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಒಂದು ಕಾಲದಲ್ಲಿ ರಾಜಕುಮಾರಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ" ಅಮೃತಾ ಹೇಳುತ್ತಾರೆ.
ಚಿತ್ರದಲ್ಲಿ ರಾಜಕುಮಾರಿ, ಹೋರಾಟಗಾರ್ತಿಯ ಪಾತ್ರದಲ್ಲಿ ಅಭಿನಯಿಸುವ ಸಲುವಾಗಿ ನಟ್ ಇದೀಗ ಕುದುರೆ ಸವಾರಿಯ ತರಬೇತಿ ಹೊಂದುತ್ತಿದ್ದಾರೆ.
"ಒಂದು ಐತಿಹಾಸಿಕ ಕದನದ ದೃಶ್ಯ ಚಿತ್ರದ ಅಂತಿಮ ಬಾಗದಲ್ಲಿ ಇರಲಿದೆ.ಇದಕ್ಕಾಗಿ ನಾನು ಸಜ್ಜಾಗುತ್ತಿದ್ದೇನೆ" ಅಮೃತಾ ಹೇಳಿದ್ದಾರೆ.
ಸೂರಿ ನಿರ್ದೇಶನದ ಚಿತ್ರದಲ್ಲಿ ನನ್ನ ಭಾಗದ ಚಿತ್ರೀಕರಣ ಸೆಪ್ಟೆಂಬರ್ 24ರಿಂದ ಪ್ರಾರಂಭವಾಗಲಿದೆ ಎಂದು ಅಮೃತಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.