'ಭೈರವ ಗೀತಾ' ಬಳಿಕ ಮತ್ತೊಂದು ಆರ್ ಜಿವಿ ಚಿತ್ರದಲ್ಲಿ ಧನಂಜಯ್?
ಕನ್ನಡದಲ್ಲಿ ಸಾಕಷ್ಟು ಹೆಸರಾದ ನಟ ಧನಂಜಯ್ ಇದೀಗ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ.

Published On :
ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹೆಸರಾದ ನಟ ಧನಂಜಯ್ ಇದೀಗ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ.
ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (ಆರ್ ಜಿವಿ) ಧನಂಜಯ್ ನಟನೆಯ ತಮ್ಮ ಚಿತ್ರ "ಭೈರವ ಗೀತಾ" ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತದೆ ಎನ್ನುವುದಾಗಿ ಘೋಷಿಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದ್ದಾರೆ.ಅಲ್ಲದೆ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಪ್ಡೇಟ್ ಮಾಡಿದ್ದಾರೆ.
ಚಿತ್ರದ ಟ್ರೇಲರ್ ನವೆಂಬರ್ 3ಕ್ಕೆ ಬಿಡ್ಗುಗಡೆಯಾಗುತ್ತಿದ್ದರೆ ನಾಲ್ಕು ಭಾಷೆಗಳಲ್ಲಿ ನವೆಂಬರ್ 22ಕ್ಕೆ ಚಿತ್ರ ತೆರೆ ಕಾಣಲಿದೆ.
ಧನಂಜಯ್ ಈ ಸಂಬಂಧ ಮಾತಣಡಿ "ಚಿತ್ರ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿರುವುದು ಸಂತಸದ ವಿಚಾರ. ಆದರೆ ಸ್ವತಃ ನಾನಿದನ್ನು ಯಾವ ರೀತಿ ಸ್ವೀಕರಿಸುವೆನೆನ್ನುವುದನ್ನು ನೋಡಬೇಕಿದೆ"
ರಾಮ್ ಗೋಪಾಲ್ ವರ್ಮ ಅವರ ಇನ್ನೊಂದು ಚಿತ್ರದಲ್ಲಿ ಸಹ ಧನಂಜಯ್ ನಟಿಸಲಿದ್ದಾರೆ. ಈ ಕುರಿತಂತೆ ಅವರೇ ಸುಳಿವು ನೀಡಿದ್ದು "ನನಗೆ ಅವರ ಮುಂದಿನ ಯೋಜನೆ ಕುರಿತು ತಿಳಿದಿಲ್ಲ. ಆದರೆ ಮಾತುಕತೆ ಪ್ರಗತಿಯಲ್ಲಿದೆ. ಭೈರವ ಗೀತಾ ಗೆ ಜನರ ಪ್ರತಿಕ್ರಿಯೆ ನೋಡಿದ ಬಳಿಕ ನನ್ನ ಮುಂದಿನ ದಾರಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವೆ.
"ನಾನು ಚಿತ್ರದ ಹೊಸ ಟ್ರೇಲರ್ ನೋಡಿದ್ದೇನೆ. ಚಿತ್ರದಲ್ಲಿನ ನನ್ನ ಅನಟನೆಗೆ ಹ್ಜನ ಮೆಚ್ಚುಗೆ ಸೂವ್ಚಿಸುತ್ತಾರೆ ಎಂದು ನಾನು ಖಚಿತವಾಗಿ ನಂಬುವೆನು" ಧನಂಜಯ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


