ಸಿನಿಮಾ ಸುದ್ದಿ

'ಗೀತಾ'ಗಾಗಿ ಕನ್ನಡಕ್ಕೆ ಬಂದ ಕೇರಳ ಬೆಡಗಿ ಪ್ರಯಾಗ ಮಾರ್ಟಿನ್!

ನಟ ಗಣೇಶ್ ಅಭಿನಯದ ಮುಂದಿನ ಚಿತ್ರ, ವಿಜಯ್ ನಾಗೇಂದ್ರ ನಿರ್ದೇಶನದ "ಗೀತಾ" ಬಹಳ ವಿಭಿನ್ನ ಕಥಾನಕವನ್ನು ಒಳಗೊಂಡಿದೆ ಎನ್ನಲಾಗಿದ್ದು ಚಿತ್ರವು ವಿಶೇಷವಾಗಿ....

'ಗೀತಾ'ಗಾಗಿ ಕನ್ನಡಕ್ಕೆ ಬಂದ ಕೇರಳ ಬೆಡಗಿ ಪ್ರಯಾಗ ಮಾರ್ಟಿನ್!
ಪ್ರಯಾಗ ರೋಸ್ ಮಾರ್ಟಿನ್
Published On :
ಬೆಂಗಳೂರು: ನಟ ಗಣೇಶ್ ಅಭಿನಯದ ಮುಂದಿನ ಚಿತ್ರ, ವಿಜಯ್ ನಾಗೇಂದ್ರ ನಿರ್ದೇಶನದ "ಗೀತಾ" ಬಹಳ ವಿಭಿನ್ನ ಕಥಾನಕವನ್ನು ಒಳಗೊಂಡಿದೆ ಎನ್ನಲಾಗಿದ್ದು ಚಿತ್ರವು ವಿಶೇಷವಾಗಿ ಕನ್ನಡ ಚಿತ್ರರಸಿಕರ ಗಮನ ಸೆಳೆಯಲಿದೆ ಎಂದು ಗಣೇಶ್ ತಮ್ಮ ಮಾದ್ಯಮ ಮಿತ್ರರೊಡನೆ ಮಾತನಾಡುತ್ತಾ ಹೇಳಿದ್ದಾರೆ.
"ಗೀತಾ" ಇದೀಗ ತಾನೆ ಯೋಜನಾ ಹಂತದಲ್ಲಿದೆ.ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ಪಾರ್ವತಿ ಅರುಣ್ ಹಾಗೂ ಪ್ರಯಾಗ ರೋಸ್ ಮಾರ್ಟಿನ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಾಗಲೇ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಖಾಣಿಸಿಕೊಂಡಿರುವ ಪ್ರಯಾಗ "ಗೀತಾ" ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.
"ರಾಮ್ ಲೀಲಾ" ಚಿತ್ರದಲ್ಲಿ ನಟಿಸಿದ್ದ ಪ್ರಯಾಗ ಅಲ್ಲಿ ದಿಲೀಪ್ ಗೆ ನಾಯಕಿಯಾಗಿ ಅಭಿನಯಿಸಿದ್ದರು. ಇಷ್ಟಲ್ಲದೆ ತಮಿಳಿನ ಕೆಲ ಚಿತ್ರಗಳಲ್ಲಿ ಸಹ ಅಭಿನಯಿಸಿರುವ ಈಕೆ ಇದೀಗ ಕನ್ನಡಕ್ಕೆ ಆಗಮಿಸುತ್ತಿರುವುದು ವಿಶೇಷ. ಇನ್ನು ಚಿತ್ರದ ಇತರೆ ಪಾತ್ರಧಾರಿಗಳ ಬಗೆಗೆ ಹೆಚ್ಚು ವಿವರಗಳಿನ್ನೂ ಬಹಿರಂಗವಾಗಿಲ್ಲ.
ಗಣೇಶ್ ಅವರ "ಗೋಲ್ಡನ್ ಮೂವೀಸ್" ಸಹಯೋಗದಲ್ಲಿ ಸಯೀದ್ ಸಲ್ಮಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ವಿಶೇಷವೆಂಅರೆ ಶಂಕರ್ ನಾಗ್ ಅಭಿನಯದ ಜನಪ್ರಿಯ ಚಿತ್ರ "ಗೀತಾ" ಶೀರ್ಷಿಕೆಯನ್ನು ಆರಿಸಿಕೊಂಡಿರುವ ಚಿತ್ರತಂಡ ಗೀತಾ ಪಾತ್ರಧಾರಿಗಾಗಿ ಸಾಕಷ್ಟು ತಯಾರಿ ನಡೆಸಿದೆ.
ಚಿತ್ರ ನಿರ್ದೇಶಕ ವಿಜಯ್ ನಾಗೇಂದ್ರ , ಮಿ.ಆಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಜತೆ ಕೆಲಸ ಮಾಡಿ ಅನುಭವ ಹೊಂದಿದ್ದು ಇದೀಗ ತಮ್ಮದೇ ಸ್ವಂತ ಚಿತ್ರ ನಿರ್ದೇಸನಕ್ಕಿಳಿದಿದ್ದಾರೆ.
ಗಣೇಶ್ ಇದಾಗಲೇ ನಟಿಸುತ್ತಿರುವ "ಆರೆಂಜ್ ಮತ್ತು :ಗಿಮಿಕ್" ಚಿತ್ರ ಚಿತ್ರೀಕರಣ ಮುಗಿಸಿದ ಬಳಿಕ ಡಿಸೆಂಬರ್ 3ರಿಂದ "ಗೀತಾ" ಚಿತ್ರೀಕರಣ ಪ್ರಾರಂಬಗೊಳ್ಳಲಿದೆ.
ವಿ. ಹರಿಕೃಷ್ಣ ಸಂಗೀತ, ಶ್ರೀಷ ಕುಡುವಳ್ಳಿ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ ಎಂದು ಚಿತ್ರತಂಡ ಹೇಳಿಕೆ ನಿಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.