#MeToo ಸುಭಾಷ್ ಘಾಯ್ ಬಲವಂತದಿಂದ ಚುಂಬನಕ್ಕೆ ಯತ್ನ : ಕಾಟೆ ಶರ್ಮಾ ದೂರು ದಾಖಲು
ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಿರುತೆರೆ ಕಲಾವಿದೆ ಹಾಗೂ ಮಾಡೆಲ್ ಕಾಟೆ ಶರ್ಮಾ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಮುಂಬೈ : ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಿರುತೆರೆ ಕಲಾವಿದೆ ಹಾಗೂ ಮಾಡೆಲ್ ಕಾಟೆ ಶರ್ಮಾ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಟೆ ಶರ್ಮಾ, ತನ್ನನ್ನು ಬಲವಂತದಿಂದ ತಬ್ಬಿಕೊಳ್ಳಲು ಹಾಗೂ ಚುಂಬಿಸಲು ಸುಭಾಯ್ ಘಾಯ್ ಪ್ರಯತ್ನಿದ್ದರು ಎಂದು ಆರೋಪಿಸಿದರು.
ಆಗಸ್ಟ್ 6 ರಂದು ತನ್ನನ್ನು ಮನೆಗೆ ಕರೆದಿದ್ದ ಸುಭಾಷ್ ಘಾಯ್, ಮನೆಯಲ್ಲಿದ್ದ ಐದಾರು ಮಂದಿ ಮುಂದೆ ಸಂದೇಶ ಕಳುಹಿಸುವಂತೆ ಕೇಳಿದರು. ಇದರಿಂದ ಭೀತಿಗೊಂಡೆ ಆದರೂ, ಅವರ ಹಿರಿತನಕ್ಕೆ ಬೆಲೆ ಕೊಟ್ಟು, ಎರಡರಿಂದ ಮೂರು ನಿಮಿಷಗಳಲ್ಲಿ ಸಂದೇಶ ಕಳುಹಿಸಿದೆ. ನಂತರ ವಾಶ್ ರೂಮ್ ಗೆ ತೆರಳಿ ತನ್ನ ಕೈ ತೊಳೆದುಕೊಂಡಿದ್ದಾಗಿ ಹೇಳಿದರು.
ವಾಶ್ ರೂಮಿಗೆ ತನ್ನನ್ನು ಹಿಂಬಾಲಿಸಿಕೊಂಡ ಬಂದು ಏನೋ ಮಾತನಾಡುವುದು ಇದೆ ಎಂದು ಹೇಳಿದರು. ಆದಾಗ್ಯೂ, ಅವರು ತನ್ನನ್ನು ತಬ್ಬಿಕೊಂಡು ಚುಂಬಿಸಲು ಪ್ರಯತ್ನಿಸಿದರು, ಬಿಡುವಂತೆ ಬೇಡಿಕೊಂಡರೂ ಬಿಡದ ಖಳನಾಯಕ ನಿರ್ದೇಶಕರು, ಆ ರಾತ್ರಿ ಸಹಕರಿಸದೆ ಇದ್ದರೆ ಆಕೆಯೊಂದಿಗೆ ಊಟ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಶರ್ಮಾ ಆರೋಪಿಸಿದರು.
ವಾರದ ಆರಂಭದಲ್ಲಿ #MeToo ಅಭಿಯಾನದಲ್ಲಿ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಾಟೆ ಶರ್ಮಾ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಆದರೆ , ಈ ಆರೋಪವನ್ನು ಸುಭಾಷ್ ಘಾಯ್ ನಿರಾಕರಿಸಿದ್ದರು. ಸತ್ಯದಿಂದ ಕೂಡಿರದ ಇಂತಹ ಆರೋಪಗಳ ವಿರುದ್ಧ ಕೇಸ್ ಹಾಕುವುದಾಗಿ 73 ವರ್ಷದ ಸುಭಾಷ್ ಘಾಯ್ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


