ಸಿನಿಮಾ ಸುದ್ದಿ

#MeToo: ಸಮಯ ಬಂದಾಗ ಸತ್ಯ ತಿಳಿಯಲಿದೆ - ಲೈಂಗಿಕ ಕಿರುಕುಳ ಆರೋಪಕ್ಕೆ ವೈರಮುತ್ತು ಪ್ರತಿಕ್ರಿಯ

ತಮಿಳು ಗೀತ ರಚನೆಕಾರ ವೈರಮುತ್ತು ಅವರು ಕೊನೆಗೂ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದು,...

#MeToo: ಸಮಯ ಬಂದಾಗ ಸತ್ಯ ತಿಳಿಯಲಿದೆ - ಲೈಂಗಿಕ  ಕಿರುಕುಳ ಆರೋಪಕ್ಕೆ ವೈರಮುತ್ತು ಪ್ರತಿಕ್ರಿಯ
ವೈರಮುತ್ತು
Published On :
ತಮಿಳು ಗೀತ ರಚನೆಕಾರ ವೈರಮುತ್ತು ಅವರು ಕೊನೆಗೂ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಸಮಯ ಬಂದಾಗ ಸತ್ಯ ತಿಳಿಯಲಿದೆ ಎಂದು ಹೇಳಿದ್ದಾರೆ.
ಖ್ಯಾತ ವ್ಯಕ್ತಿಗಳ ವಿರುದ್ಧ ಸುಳ್ಳು ಆರೋಪ ಮಾಡುವುದು ಈಗ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ನಾನು ಎದುರಿಸಿದ ಹಲವು ಅವಮಾನಗಳಲ್ಲಿ ಇದು ಒಂದು ಎಂದು ಪರಿಗಣಿಸಿದ್ದು, ಇದಕ್ಕೆ ಸಮಯವೇ ಉತ್ತರ ನೀಡಲಿದೆ ಎಂದು ವೈರಮುತ್ತು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ವೈರಮುತ್ತ ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಾಯಕಿ ಚಿನ್ಮಯಿ ಅವರು, ಸುಳ್ಳುಗಾರ ಎಂದು ಟ್ವೀಟ್ ಮಾಡಿದ್ದಾರೆ.
ಖ್ಯಾತ ಗಾಯಕಿ ಚಿನ್ಮಮಿ ಹಾಗೂ ಮತ್ತೊಬ್ಬ ಮಹಿಳೆ ವೈರಮುತ್ತು ವಿರುದ್ಧ #MeToo ಅಭಿಯಾನದಡಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. 
ವೈರಮುತ್ತು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿದರೆ, ಮತ್ತೊಬ್ಬ ಮಹಿಳೆ ನನ್ನನ್ನು ತಬ್ಬಿಕೊಂಡು ಕಿಸ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.