ಸಿನಿಮಾ ಸುದ್ದಿ

ಬಾಲಿವುಡ್ 'ಸಂಸ್ಕಾರಿ ಬಾಬೂಜಿ' ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಆರೋಪ

ನಟಿ ಕಂಗನಾ ರಣಾವತ್ ಆರೋಪದ ಬೆನ್ನಲ್ಲೇ ಸಹ ನಟರಿಂದ ತಾವು ಅನುಭವಿಸಿದ ಲೈಂಗಿಕ ಕಿರುಕುಳ ಕುರಿತಂತೆ ಒಬ್ಬೊಬ್ಬರಾಗಿ ಬಹಿರಂಗಪಡಿಸಲು ಆರಂಭಿಸಿದ್ದಾರೆ...

ಬಾಲಿವುಡ್ 'ಸಂಸ್ಕಾರಿ ಬಾಬೂಜಿ' ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಆರೋಪ
ಬಾಲಿವುಡ್ ಸಂಸ್ಕಾರಿ ನಟ ಅಲೋಕ್ ನಾಥ್
Published On :
ಮುಂಬೈ: ನಟಿ ಕಂಗನಾ ರಣಾವತ್ ಆರೋಪದ ಬೆನ್ನಲ್ಲೇ ಸಹ ನಟರಿಂದ ತಾವು ಅನುಭವಿಸಿದ ಲೈಂಗಿಕ ಕಿರುಕುಳ ಕುರಿತಂತೆ ಒಬ್ಬೊಬ್ಬರಾಗಿ ಬಹಿರಂಗಪಡಿಸಲು ಆರಂಭಿಸಿದ್ದಾರೆ. 
ಇದೀಗ ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಕೂಡ ಇದೀಗ ಅತ್ಯಾಚಾರ ಆರೋಪವೊಂದು ಕೇಳಿಬಂದಿದೆ. 
ಹಿರಿಯ ಲೇಖಕಿ ಹಾಗೂ ಚಿತ್ರ ನಿರ್ಮಾಪಕಿ 1990ರ 'ತಾರಾ' ಖ್ಯಾತಿಯ ಅವಂತ್ ಗರ್ಡೋ ಶೋ ಮೂಲಕ ಖ್ಯಾತಿ ಪಡೆದಿದ್ದ ವಿಂತಾ ನಂದಾ ಅವರು, 2 ದಶಕಗಳ ಕಾಲ ಅಲೋಕ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 
ಈ ವಿಚಾರವನ್ನು ಬಹಿರಂಪಡಿಸಲು ನಾನು 19 ವರ್ಷಗಳ ಕಾಲ ಕಾಯಬೇಕಾಯಿತು ಎಂದು ವಿಂತಾ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲೋಕ್ ಅವರ ಹೆಸರನ್ನು ನೇರವಾಗಿ ಹೇಳದ ವಿಂತಾ ಅವರು 1990ರ ದಶಕದ ಖ್ಯಾತ ಸಂಸ್ಕಾರಿ ಮತ್ತು ಸುವಿಖ್ಯಾತ ಟಿವಿ ನಟನಿಂದ ನನ್ನ ಮೇಲೆ 2 ದಶಕಗಳ ಕಾಲ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಹೇಳಿದ್ದಾರೆ. 
ಈ ಕುರಿತಂತೆ ಐಎಎನ್ಎಸ್'ಗೆ ಸಂದೇಶದ ಮೂಲಕ ದೃಢಪಡಿಸಿರುವ ನಂದಾ ಅವರು, ಹೌದು ಅದು ಅಲೋಕ್ ನಾಥ್ ಅವರೇ, ಸಂಸ್ಕಾರಿ ನಟನೆಂದು ಹೇಳಿದರಷ್ಟೇ ಸಾಕೆಂದು ನಾನು ತಿಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ. 
ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿನಿಮಾ ಮತ್ತು ಕಲಾವಿದರ ಸಂಘ (ಸಿಐಎನ್'ಟಿಎಎ), ಅಲೋಕ್ ನಾಥ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.