'ದ ಟೆರರಿಸ್ಟ್' ಗೆ ಪೊಲೀಸರ ಮೊರೆ ಹೋಗಿದ್ದ ನಿರ್ದೇಶಕ ಪಿ ಸಿ ಶೇಖರ್
ದ ಟೆರರಿಸ್ಟ್ ಎಂದು ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಸ್ಯಾಂಡಲ್ ವುಡ್ ನಿರ್ದೇಶಕ ಪಿ ಸಿ ಶೇಖರ್ ಈ ಮುಂದಿನ...

ದ ಟೆರರಿಸ್ಟ್ ಎಂದು ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಸ್ಯಾಂಡಲ್ ವುಡ್ ನಿರ್ದೇಶಕ ಪಿ ಸಿ ಶೇಖರ್ ಈ ಮುಂದಿನ ವಾರ ಚಿತ್ರ ತರುತ್ತಿದ್ದಾರೆ. ಚಿತ್ರಕ್ಕೆ ಟೆರರಿಸ್ಟ್ ಎಂದು ಶೀರ್ಷಿಕೆಯಿಡುವಾಗ ಅದಕ್ಕೆ ಎದುರಾಗಬಹುದಾದ ಟೀಕೆಗಳು, ವಿರೋಧಗಳ ಬಗ್ಗೆ ಅವರಿಗೆ ಅರಿವಿತ್ತಂತೆ.
ವಿಜಯದಶಮಿ ದಿನ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಿತ್ರದ ಬಗ್ಗೆ ಮಾತನಾಡಿದ ಅವರು, ಟೆರರಿಸ್ಟ್ ಅನ್ನುವ ಪದ ಇಂದು ಸಾಮಾನ್ಯವಾಗಿದೆ, ಪ್ರತಿನಿತ್ಯವೆಂಬಂತೆ ನಾವು ಈ ಪದವನ್ನು ಕೇಳುತ್ತೇವೆ. ನಮ್ಮ ದೇಶವನ್ನು ಇಂದು ಕಾಡುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದುದು ಭಯೋತ್ಪಾದನೆಯಾಗಿದೆ ಎನ್ನುತ್ತಾರೆ.
ಈ ಶೀರ್ಷಿಕೆಯನ್ನಿಟ್ಟುಕೊಂಡು ಫಿಲ್ಮ್ ಚೇಂಬರ್ ಮತ್ತು ಸೆನ್ಸಾರ್ ಬೋರ್ಡ್ ಗೆ ಹೋದಾಗ ಅಲ್ಲಿನ ಅಧಿಕಾರಿಗಳು ಕೂಡ ಪ್ರಶ್ನಿಸಿದ್ದರಂತೆ. ಚಿತ್ರವನ್ನು ವೀಕ್ಷಿಸಿ ಪ್ರಮಾಣಪತ್ರ ನೀಡುವಾಗಲೂ ಸಮಯ ಹಿಡಿಯಿತ್ತಂತೆ. ಆದರೆ ಯಾವುದೇ ಕಟ್ ಗಳಿಲ್ಲದೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ ಖುಷಿಯಲ್ಲಿದ್ದಾರೆ.
ಚಿತ್ರ ವಾಸ್ತವಕ್ಕೆ ಹತ್ತಿರವಾದ್ದರಿಂದ ಹೊರಭಾಗದಲ್ಲಿಯೇ ಹೆಚ್ಚು ಚಿತ್ರೀಕರಣವಾಗಬೇಕಾದ್ದರಿಂದ ಪೊಲೀಸರ ಅನುಮತಿ ಪಡೆಯಬೇಕಾಯಿತಂತೆ. ಮೆಜೆಸ್ಟಿಕ್ ಅಥವಾ ಕೆ ಆರ್ ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ತರಹದ ವಸ್ತುಗಳನ್ನಿಡಬೇಕಾಗಿತ್ತು. ಇದಕ್ಕಾಗಿ ವಿವಿಧ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆಯಬೇಕಾಗಿತ್ತು. ಚಿತ್ರದ ಅವಶ್ಯಕತೆ ಬಗ್ಗೆ ಪೊಲೀಸರಿಗೆ ವಿವರಿಸಬೇಕಾಗಿತ್ತು. ಪೊಲೀಸರಿಂದ ನನಗೆ ಪ್ರೋತ್ಸಾಹ ಸಿಕ್ಕಿತು. ಎಲ್ಲದಕ್ಕೂ ಸಹಕರಿಸಿದರು ಎಂದರು. ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಲ್ಲಿ ಇದು ಶೇಖರ್ ಅವರಿಗೆ ಕಠಿಣವಾದದ್ದಾಗಿತ್ತಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


