ಸಿನಿಮಾ ಸುದ್ದಿ

ಕಾಲಿವುಡ್​ ನಟಿ ರಿಯಾಮಿಕಾ ನೇಣಿಗೆ ಶರಣು, ಪೊಲೀಸ್ ತನಿಖೆ ಆರಂಭ

ಕಾಲಿವುಡ್ ನ ಉದಯೋನ್ಮುಖ ನಟಿ ರಿಯಾಮಿಕಾ(26 ವರ್ಷ) ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.

ಕಾಲಿವುಡ್​ ನಟಿ ರಿಯಾಮಿಕಾ ನೇಣಿಗೆ ಶರಣು, ಪೊಲೀಸ್ ತನಿಖೆ ಆರಂಭ
ಸಂಗ್ರಹ ಚಿತ್ರ
Published On :
ಚೆನ್ನೈ: ಕಾಲಿವುಡ್ ನ ಉದಯೋನ್ಮುಖ ನಟಿ ರಿಯಾಮಿಕಾ(26 ವರ್ಷ) ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.
ಚೆನ್ನೈನ ವಲಸರವಕ್ಕಮ್​ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನಟಿ ರಿಯಾಮಿಕಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿದೆ.
ರಿಯಾಮಿಕಾ ತನ್ನ ಸಹೋದರ ಪ್ರಕಾಶ್ ​ರೊಂದಿಗೆ ವಲಸರವಕ್ಕಮ್​ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು. ರಾತ್ರಿ ತಡವಾಗಿ ಮನೆಗೆ ಬಂದಳು. ನಾನವಳನ್ನು ಕೊನೆಯ ಬಾರಿಗೆ ಜೀವಂತವಾಗಿ ನೋಡಿದ್ದು ಅಂದೇ, ಅಂದು ಅವಳು ತುಂಬಾ ದಣಿದಿದ್ದ ಸ್ಥಿತಿಯಲ್ಲಿದ್ದಳು ಎಂದು ಸಹೋದರ ಪ್ರಕಾಶ್​ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ತಮ್ಮ ಸ್ನೇಹಿತ ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾಳೆ. ಆದರೆ, ಕರೆ ಸ್ವೀಕರಿಸಿದ ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ​ ವಾಪಸ್​ ಕರೆ ಮಾಡಿದಾಗ ನಾಟ್​ ರೀಚಬಲ್​ ಆಗಿದೆ. ತಕ್ಷಣ ಮನೆಗೆ ಹೋಗಿ ಪ್ರಕಾಶ್​ ಬಳಿ ಕೇಳಿದ್ದಾನೆ. ಪ್ರಕಾಶ್​ ಹಾಗೂ ದಿನೇಶ್​ ಆಕೆಯ ಕೋಣೆಯ ಬಳಿ ಹೋದಾಗ ಲಾಕ್​ ಆಗಿದ್ದನ್ನು ಕಂಡು ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ತೆಗೆಯದಿದ್ದಾಗ ಪ್ರಕಾಶ್​ ಕಿಟಕಿಯನ್ನು ಒಡೆದು ನೋಡಲು ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. 
ಇನ್ನು ರಿಯಾಮಿಕಾ ತಮಿಳು ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದು, ಕುಂಡ್ರತೈಲ್ ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿ-ಯಿನ್ ಅಟ್ಟಮ್ ಆರಂಬಂ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದ ರಿಯಾಮಿಕಾ ಅವರಿಗೆ ಕಾಲಿವುಡ್ ನಲ್ಲಿ ಹೆಚ್ಚು ಅವಕಾಶ ಬರುತ್ತಿತ್ತಂತೆ. ಹೆಚ್ಚು ಚಿತ್ರದಲ್ಲಿ ಭಾಗಿಯಾಗದೇ ಒತ್ತಡಕ್ಕೆ ಒಳಗಾಗಿದ್ದರು. ಇದೇ ಅವಳ ಸಾವಿಗೆ ಕಾರಣ ಇರಬಹುದು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.