ಅಮರ್ ಚಿತ್ರಕ್ಕಾಗಿ ಅಂಬರೀಷ್ ಸಿನಿಮಾದ ಪ್ರಸಿದ್ದ ಟೈಟಲ್ ಸಾಂಗ್ ಪುನರ್ ಚಿತ್ರೀಕರಣ!
ಅಭಿಷೇಕ್ ಅಭಿನಯದ ಅಮರ್ ಚಿತ್ಕಕ್ಕಾಗಿ ಅಂಬರೀಷ್ ನಟನೆಯ ಚಿತ್ರವೊಂದರ ಟೈಟಲ್ ಟ್ರ್ಯಾಕ್ ಅನ್ನು ಮತ್ತೆ ಪುನರ್ ಚಿತ್ರಿಸಲಾಗುತ್ತಿದೆ...

Published On :
ಬೆಂಗಳೂರು: ಅಭಿಷೇಕ್ ಅಭಿನಯದ ಅಮರ್ ಚಿತ್ಕಕ್ಕಾಗಿ ಅಂಬರೀಷ್ ನಟನೆಯ ಚಿತ್ರವೊಂದರ ಟೈಟಲ್ ಟ್ರ್ಯಾಕ್ ಅನ್ನು ಮತ್ತೆ ಪುನರ್ ಚಿತ್ರಿಸಲಾಗುತ್ತಿದೆ.
ನಾಗಶೇಖರ್ ನಿರ್ದೇಶನದ ಅಮರ್ ಚಿತ್ರಕ್ಕಾಗಿ 1987 ರಲ್ಲಿ ತೆರೆಕಂಡ ಅಂಬರೀಷ್ ನಟನೆಯ ಒಲವಿನ ಉಡುಗೊರೆ ಸಿನಿಮಾದ ಟೈಟಲ್ ಸಾಂಗ್ ಒಲವಿನ ಉಡುಗೊರೆ ಕೊಡಲೇನು ಹಾಡನ್ನು ಪುನರ್ ಚಿತ್ರೀಕರಿಸಲಾಗುತ್ತಿದೆ.
ಮೂಲ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರು ನಿರ್ದೇಶಿಸಿದ್ದರು, ಎಂ,ರಂಗರಾವ್ ಸಂಗೀತ ಸಂಯೋಜಿಸಿದ್ದು, ಆರ್.ಎನ್ ಜಯಗೋಪಾಲ್ ಸಾಹಿತ್ಯ ಬರೆದಿದ್ದರು, ಈ ಹಾಡು ಅಂಬರೀಷ್ ಅವರ ಮೆಚ್ಚಿನ ಗೀತೆ ಕೂಡ ಇದಾಗಿತ್ತು.
ಒಲವಿನ ಉಡುಗೊರೆ ಹಾಡು ಹಾಡಿನಲ್ಲಿ ಅಭಿಷೇಕ್ ಮತ್ತು ತಾನ್ಯ ಹೊಪೆ ನಟಿಸಿದ್ದಾರೆ, ಈ ಹಾಡನ್ನು ಸಂಪೂರ್ಣವಾಗಿ ಮೈಸೂರಿನಲ್ಲಿ ಚಿತ್ರೀಕರಿಸಲಾಗುತ್ತದೆ.ಆ ಹಾಡು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಮರ್ ಸಿನಿಮಾದಲ್ಲಿ ಅಭಿಷೇಕ್ ಬೈಕ್ ರೈಡರ್ ಆಗಿ ನಟಿಸಿದ್ದಾರೆ, ಈ ಸಿನಿಮಾಗಾಗಿ ಪ್ರಪಂಚದಾದ್ಯಂತ ಸಂಚರಿಸಲಿರುವ ಸಿನಿಮಾ ತಂಡ ಹೊಸ ದಾಖಲೆ ನಿರ್ಮಿಸಲು ಕಾಯುತ್ತಿದೆ, ಇತ್ತೀಚೆಗೆ ಚಿತ್ರತಂಡ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ಮುಗಿಸಿದೆ. ಶೇ.80 ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನುಳಿದಿರುವ ಕೆಲವು ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


