ಸಿನಿಮಾ ಸುದ್ದಿ

ನಿರ್ಮಾಪಕನಿಗೆ ಕೈಕೊಟ್ರಾ ಪ್ರೇಮ್? 'ಜೋಗಿ ಪ್ರೇಮ್' ಅಲ್ಲ 'ಟೋಪಿ ಪ್ರೇಮ್' ಎಂದು ಶ್ರೀನಿವಾಸ್ ಹೇಳಿದ್ದೇಕೆ?

ದಿ ವಿಲನ್ ಚಿತ್ರವನ್ನು ಟೀಕಿಸಿದ್ದ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಇದೀಗ ನಿರ್ಮಾಪಕರೊಬ್ಬರು ಸಿಡಿದೆದ್ದಿದ್ದಾರೆ...

ನಿರ್ಮಾಪಕನಿಗೆ ಕೈಕೊಟ್ರಾ ಪ್ರೇಮ್? 'ಜೋಗಿ ಪ್ರೇಮ್' ಅಲ್ಲ 'ಟೋಪಿ ಪ್ರೇಮ್' ಎಂದು ಶ್ರೀನಿವಾಸ್ ಹೇಳಿದ್ದೇಕೆ?
ಪ್ರೇಮ್-ಕನಕಪುರ ಶ್ರೀನಿವಾಸ್
Published On :
ಬೆಂಗಳೂರು: ದಿ ವಿಲನ್ ಚಿತ್ರವನ್ನು ಟೀಕಿಸಿದ್ದ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಇದೀಗ ನಿರ್ಮಾಪಕರೊಬ್ಬರು ಸಿಡಿದೆದ್ದಿದ್ದಾರೆ. 
ನಿರ್ದೇಶಕ ಪ್ರೇಮ್ ಅವರು ಜೋಗಿ ಪ್ರೇಮ್ ಅಲ್ಲ ಟೋಪಿ ಪ್ರೇಮ್ ಎಂದು ಕಿಡಿಕಾರಿರುವ ನಿರ್ದೇಶಕ ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ನನ್ನ ಬಳಿ ಸಿನಿಮಾ ಮಾಡುವುದಾಗಿ ಹೇಳಿ ಮುಂಗಡ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ಆರೋಪಿಸಿದ್ದಾರೆ. 
ತಾರಕಾಸುರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಅವರು ನಿರ್ದೇಶಕ ಪ್ರೇಮ್ ನನ್ನ ಬಳಿ ಸಿನಿಮಾ ಮಾಡುತ್ತೇನೆ ಎಂದು ಹೇಳಿ 9 ವರ್ಷದ ಹಿಂದೆ 10 ಲಕ್ಷ ರುಪಾಯಿ ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ ಇನ್ನು ಹಣ ನೀಡದೆ ಅದೇ ಟೋಪಿ ಹಾಕಿಕೊಂಡು ಓಡುತ್ತಿದ್ದಾರೆ ಎಂದರು. 
ಜೋಗಿ ಚಿತ್ರದ ವೇಳೆಯೇ 72 ಲಕ್ಷ ರುಪಾಯಿ ನೀಡಿ ನಾನು ಅವರ ಸಿನಿಮಾದ ತೆಲುಗು ಭಾಷೆಯ ರೈಟ್ಸ್ ಪಡೆದೆ, ಬಳಿಕ ಅವರೊಂದಿಗೆ ಸಿನಿಮಾ ಮಾಡಲು ಹಣ ನೀಡಿದ್ದೆ. ಇತ್ತೀಚೆಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಅವರ ಬಳಿ ಹಣ ಕೇಳಲು ಮನೆಗೆ ತೆರಳಿದ್ದೆ. ಆಗ 2.50 ಲಕ್ಷ ರುಪಾಯಿ ನೀಡಿದರು. 
ಇನ್ನುಳಿಂದ ಹಣವನ್ನು ಮುಂದಿನ ದಿನಗಳಲ್ಲಿ ನೀಡೊದಾಗಿ ಹೇಳಿದ್ದ ಪ್ರೇಮ್ ಇನ್ನು ಕೊಟ್ಟಿಲ್ಲ. ಕೇಳಿದರೆ ಕೊಡುತ್ತೇನೆ ಕೊಡುತ್ತೇನೆ ಎಂದು ಕಾಲ ದೂಡುತ್ತಾ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.