ಸಿನಿಮಾ ಸುದ್ದಿ

ಜೋಗಿ ಪ್ರೇಮ್ ಮತ್ತೆ 'ಗಾಂಧಿಗಿರಿ'!

ವರ್ಷಗಳ ಹಿಂದೆ ಜೋಗಿ ಪ್ರೇಮ್ ಗಾಂಧಿಗಿರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೇ ಸಮಯದಲ್ಲಿ ಪ್ರೇಮ್ ದಿ ವಿಲನ್ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ...

ಜೋಗಿ ಪ್ರೇಮ್ ಮತ್ತೆ 'ಗಾಂಧಿಗಿರಿ'!
ಗಾಂಧಿಗಿರಿ ಪೋಸ್ಟರ್
Published On :
ವರ್ಷಗಳ ಹಿಂದೆ ಜೋಗಿ ಪ್ರೇಮ್ ಗಾಂಧಿಗಿರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೇ ಸಮಯದಲ್ಲಿ ಪ್ರೇಮ್ ದಿ ವಿಲನ್ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ಈ ಯೋಜನೆ ನಿಂತು ಹೋಗಿತ್ತು. ಇದೀಗ ಗಾಂಧಿಗಿರಿಗೆ ಮತ್ತೆ ಜೀವ ಬಂದಿದೆ. ಹೌದು ಚಿತ್ರದ ಶೂಟಿಂಗ್ ನಲ್ಲಿ ಪ್ರೇಮ್ ಭಾಗಿಯಾಗುತ್ತಿದ್ದಾರೆ. 
ಇಂದಿನಿಂದ ಮೈಸೂರಿನಲ್ಲಿ ಗಾಂಧಿಗಿರಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಮುಂದಿನ 30 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದ್ದು ಮತ್ತೆ ಜೋಗಿ ಪ್ರೇಮ್ ಆನ್ ಸ್ಕ್ರೀನ್ ಮುಂದೆ ವಿಜೃಂಬಿಸಲಿದ್ದಾರೆ. 
ಕಳೆದ 2017ರ ಫೆಬ್ರವರಿಯಲ್ಲಿ ಗಾಂಧಿಗಿರಿ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಇದೀಗ ಒಂದೂವರೆ ವರ್ಷಗಳ ನಂತರ ಮತ್ತೆ ಚಿತ್ರ ಸೆಟ್ಟೇರುತ್ತಿದೆ. ಚಿತ್ರವನ್ನು ರಘು ಹಾಸನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. 
ಚಿತ್ರದಲ್ಲಿ ಜೋಗಿ ಪ್ರೇಮ್ ಗೆ ತಾಯಿಯಾಗಿ ಅರುಂಧತಿ ನಾಗ್ ನಟಿಸುತ್ತಿದ್ದು ಜೋಡಿಯಾಗಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.