ದಾಖಲೆಗಳನ್ನು ಮುರಿಯಲು ಸಜ್ಜಾಗುತ್ತಿದೆ ದರ್ಶನ್ ಅಭಿನಯದ 'ಯಜಮಾನ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಚಿತ್ರ ಯಜಮಾನ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದು, ನಿರೀಕ್ಷೆಗಳಂತೆಯೇ ಚಿತ್ರದ ತಂಡ ದಾಖಲೆಗಳನ್ನು ಮುರಿಯಲು ಸಿದ್ಧತೆಗಳನ್ನು ನಡೆಸುತ್ತಿದೆ...

Published On :
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಚಿತ್ರ ಯಜಮಾನ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದು, ನಿರೀಕ್ಷೆಗಳಂತೆಯೇ ಚಿತ್ರದ ತಂಡ ದಾಖಲೆಗಳನ್ನು ಮುರಿಯಲು ಸಿದ್ಧತೆಗಳನ್ನು ನಡೆಸುತ್ತಿದೆ.
ಚಿತ್ರ ಚಿತ್ರೀಕರಣ ಆರಂಭವಾದಾಗ ಇತರೆ ಚಿತ್ರಗಳ ದಾಖಲೆಗಳನ್ನು ಮುರಿಯುವುದಾಗಿ ಈ ಹಿಂದೆಯೇ ಚಿತ್ರ ನಿರ್ದೇಶಕಿ ಶೈಲಜಾ ನಾಗ್ ಹಾಗೂ ಬಿ.ಸುರೇಭ್ ಅವರು ಭರವಸೆ ನೀಡಿದ್ದರು. ಇದರಂತೆ ಚಿತ್ರದ ತಂಡ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ.
ಕಲಾ ನಿರ್ದೇಶಕ ಶಶಿಧರ್ ಅಡಪ ಅವರು ಈಗಾಗಲೇ 10 ಭರ್ಜರಿ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು, ಈ ಸೆಟ್ ಗಳಲ್ಲಿ ವಿಎಫ್ಎಕ್ಸ್ ಹಾಗೂ 3ಡಿ ಶಾಟ್ ಗಳನ್ನು ತೆಗೆಯಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಚಿತ್ರ ಕುರಿತು ಮಾಹಿತಿ ನೀಡಿರುವ ನಿರ್ಮಾಪಕಿ ಶೈಲಜಾ ಅವರು, ಚಿತ್ರಕಥೆಗೆ ನ್ಯಾಯ ಒದಗಿಸಲು ಚಿತ್ರೀಕರಣಕ್ಕೆ ಸೂಕ್ತ ಪ್ರದೇಶಗಳು ದೊರಕಿಲ್ಲ. ಕಥೆ ಕೇವಲ ಪತಿ ಹಾಗೂ ಪತ್ನಿಯ ನಡುವಿನ ಸಂಬಂಧಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಕಥೆಯಲ್ಲಿ ಸುಂದರವಾದ ಪ್ರೇಮ ಕಥೆಯಿದೆ. ಸಾಮಾನ್ಯ ಸೆಟ್ ನಲ್ಲಿಯೇ ಚಿತ್ರೀಕರಣ ಮಾಡಬಹುದಿತ್ತು. ಆದರೆ, ಚಿತ್ರ ಕಮರ್ಷಿಯಲ್ ಮಾಸ್ ಎಂಟರ್ಟೇನರ್ ಆಗಿದ್ದು, ಪ್ರತೀಯೊಂದನ್ನು ನಾವು ಸೂಕ್ಷ್ಮವಾಗಿ ನೋಡಬೇಕಾಗಿದೆ. ಚಿತ್ರದ ಪ್ರತೀ ಭಾಗ ಹಾಗೂ ಹಾಡು, ಫೈಟ್ ಗಳು ಕಥೆಯನ್ನು ಸಂಪೂರ್ಣವಾಗಿ ಹೇಳುತ್ತದೆ ಎಂದು ಹೇಳಿದ್ದಾರೆ.
ಚಿತ್ರ ಸೆಟ್'ಗೆ ಬಂದಾಗ ಪ್ರತೀಯೊಬ್ಬ ಸಿನಿಮಾ ನಿರ್ಮಾಪಕರೂ ದೊಡ್ಡ ದೊಡ್ಡ ಕನಸು ಕಾಣುತ್ತಾನೆ. ಆ ಟ್ರೆಂಡ್'ಗೆ ನಾನು ಹೊರತಾಗಿಲ್ಲ. ಶಶಿಧರ್ ಅಡಪ ಅವರು ಅತ್ಯುತ್ತಮ ಕಲಾ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕಾಗಿ ನಾವು ದೊಡ್ಡ ಹಿನ್ನಲೆಯನ್ನೇ ಸೃಷ್ಟಿಸಿದ್ದೇವೆ. ಚಿತ್ರಕ್ಕಾಗಿ ಬಳಕೆ ಮಾಡುತ್ತಿರುವ ದೊಡ್ಡ ದೊಡ್ಡ ಸೆಟ್ ಗಳು ಯಜಮಾನ ಕಥೆಯನ್ನು ಹೇಳುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಸಿನಿಮಾದ ನಿರ್ದಿಷ್ಟ ಬಜೆಟ್ ಬಗ್ಗೆ ಶೈಲಜಾ ಅವರು ಮಾಹಿತಿ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


