ಸಿನಿಮಾ ಸುದ್ದಿ

'8ಎಂಎಂ ಬುಲೆಟ್' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಒನ್ ಮ್ಯಾನ್ ಶೋ!

ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಬುಲೆಟ್ ಚಿತ್ರ ಇದೇ ವಾರ ತೆರೆಗಪ್ಪಳಿಸಲಿದ್ದು ಅಭಿಮಾನಿಗಳು ಹೆಚ್ಚು ಕಾತುರರಾಗಿದ್ದಾರೆ...

'8ಎಂಎಂ ಬುಲೆಟ್' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಒನ್ ಮ್ಯಾನ್ ಶೋ!
ಜಗ್ಗೇಶ್
Published On :
ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಬುಲೆಟ್ ಚಿತ್ರ ಇದೇ ವಾರ ತೆರೆಗಪ್ಪಳಿಸಲಿದ್ದು ಅಭಿಮಾನಿಗಳು ಹೆಚ್ಚು ಕಾತುರರಾಗಿದ್ದಾರೆ. 
ಚಿತ್ರವನ್ನು ಹರಿಕೃಷ್ಣ ಎಂಬುವರು ನಿರ್ದೇಶಿಸಿದ್ದು ಚಿತ್ರದಲ್ಲಿ ಜಗ್ಗೇಶ್ ಒನ್ ಮ್ಯಾನ್ ಶೋ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಜಗ್ಗೇಶ್ ನೆಗೆಟಿವ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಚಿತ್ರಕಥೆ 8 ಕೊಲೆಗಳ ಸುತ್ತ ಸುತ್ತುತ್ತದೆ. ಈ ಕೊಲೆಗಳು ಆಗಲು ಕಾರಣ ಏನೆಂಬುದೆ ಚಿತ್ರಕಥೆ ಎಂದು ಹರಿಕೃಷ್ಣ ಹೇಳಿದ್ದಾರೆ. 
ಚಿತ್ರದಲ್ಲಿ ವಸಿಷ್ಠ ಸಿಂಹ ಹಾಗೂ ಮಯೂರಿ ಸಹ ಅಭಿನಯಿಸಿದ್ದಾರೆ. ಇದರಲ್ಲಿ ಇವರಿಬ್ಬರ ಪಾತ್ರ ವಿಭಿನ್ನವಾಗಿದೆ. ಇವರಿಬ್ಬರು ಒಂದೇ ಅಥವಾ ಎರಡು ಬಾರಿ ಮಾತ್ರ ಜಗ್ಗೇಶ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಕ್ಲೈಮ್ಯಾಕ್ಸ್ ತನಕ ಚಿತ್ರದಲ್ಲಿ ಏನಾಗುತ್ತಿದೆ ಎಂಬ ಕುತೂಹಲ ಇರಲಿದೆ ಎಂದರು. 
8ಎಂಎಂ ಬುಲೆಟ್ ಚಿತ್ರದಲ್ಲಿ ಜಗ್ಗೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಅವರ ಲುಕ್ ಅಭಿಮಾನಿಗಳನ್ನು ಆಕರ್ಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.