ಸಿನಿಮಾ ಸುದ್ದಿ

ಖಾಸಗಿ ಫೋಟೋ ಸೋರಿಕೆ: ಕೇಸು ದಾಖಲಿಸಿದ ನಟಿ ಅಕ್ಷರಾ ಹಾಸನ್

2015 ರಲ್ಲಿ ಶಮಿತಾಬ್ ಸಿನಿಮಾ ಮೂಲಕ ಬಾಲಿವುಡ್ ಮೂಲಕ ಪಾದಾರ್ಪಣೆ ಮಾಡಿದ್ದ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಸಾಮಾಜಿಕ ....

ಖಾಸಗಿ ಫೋಟೋ ಸೋರಿಕೆ: ಕೇಸು ದಾಖಲಿಸಿದ ನಟಿ ಅಕ್ಷರಾ ಹಾಸನ್
ಅಕ್ಷರಾ ಹಾಸನ್
Published On :
ನವದೆಹಲಿ: 2015 ರಲ್ಲಿ ಶಮಿತಾಬ್ ಸಿನಿಮಾ ಮೂಲಕ ಬಾಲಿವುಡ್ ಮೂಲಕ ಪಾದಾರ್ಪಣೆ ಮಾಡಿದ್ದ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತಿಚೆಗೆ ವೈರಲ್ ಆಗಿತ್ತು.
ಟೂ ಪೀಸ್ ನಲ್ಲಿದ್ದ ನಟಿಯ ಖಾಸಗಿ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು, ಹೀಗಾಗಿ ಭಾನುವಾರ ನಟಿ ಅಕ್ಷರಾ ಹಾಸನ್ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.
ಅಕ್ಷರಾ ದೂರಿನ ಆಧಾರದ ಮೇಲೆ ವಿಶೇಷ ತಂಡ ರಚಿಸಿರುವ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ನಡೆದಿರುವುದು ದುರಾದೃಷ್ಟಕರ ಎಂದು ಅಕ್ಷರಾ ಟ್ವೀಟ್ ಮಾಡಿದ್ದಾರೆ,. ನಾನು ಇದರಿಂದ ತುಂಬಾ ವಿಚಲಿತಳಾಗಿದ್ದೇನೆ, ನನಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ಅವು ತಿರುಚಿದ ಫೋಟೋಗಳಲ್ಲ, ಆ ಫೋಟೋಗಳು ನನ್ನವೇ ಏಕೆ ಹೀಗೆ ಮಾಡಿದರೋ. ಯಾರು ಮಾಡಿದರೋ ಎಂಬುದು ನನಗೆ ತಿಳಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಂಬಯಿ ಪೊಲೀಸರಿಗೆ ಹಾಗೂ ಸೈಬರ್ ವಿಭಾಗದಲ್ಲೂ ದೂರು ದಾಖಲಿಸಿರುವುದಾಗಿ ಬರೆದುಕೊಂಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.