ಸಿನಿಮಾ ಸುದ್ದಿ

ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಮೊದಲ ಭಾಗದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಅಭಿಮಾನಿಗಳಿಗೆ ಭಾನುವಾರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ...

ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ
ಸಂಗ್ರಹ ಚಿತ್ರ
Published On :
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಮೊದಲ ಭಾಗದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಅಭಿಮಾನಿಗಳಿಗೆ ಭಾನುವಾರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಯಶ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ. 
ಎಲ್ಲಾ ಅಭಿಮಾನಿಗಳಿಗೂ, ಕಲಾಭಿಮಾನಿಗಳಿಗೂ, ಕನ್ನಡಾಭಿಮಾನಿಗಳಿಗೂ ಧನ್ಯವಾದಗಳು. ಕೆಜಿಎಫ್ ಟ್ರೈಲರ್ ಸ್ವೀಕರಿಸಿದ ರೀತಿ ಬಹಳ ಸಂತಸವನ್ನು ತಂದಿದೆ. 2 ವರ್ಷದಿಂದ ನಾವು ಪಟ್ಟ ಶ್ರಮವನ್ನು ನಿಮಗೆ ತೋರಿಸಲು ಪ್ರಯತ್ನಿಸಿದ್ದೆವು. ಟ್ರೈಲರ್ ಮೂಲಕ ಅದನ್ನು ಪ್ರಸ್ತುತ ಪಡಿಸಿದ್ದೇವೆ. ನಮ್ಮ ಶ್ರಮಕ್ಕೆ ಜನರ ಪ್ರತಿಕ್ರಿಯೆ ಹಾಗೂ ಅವರ ಮೆಚ್ಚುಗೆ ನೋಡಿ ಸಾರ್ಥಕತೆ ಸಿಕ್ಕಿದೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಅತ್ಯುತ್ತಮ ಪ್ರತಿಕ್ರಿಯೆ ಮತ್ತಷ್ಟು ಹೆಚ್ಚು ಕೆಲಸ ಮಾಡಲು ಹುರುಪು ನೀಡಿದಂತಾಗಿದೆ. ಜನರು ಆನಂದಿಸಿದ ವಿಡಿಯೋಗಳನ್ನು ನೋಡಿದ್ದೇನೆ. ನನಗೂ ಸಂತೋಷವಾಗಿದೆ. ಚಿತ್ರಮಂದಿರದಲ್ಲೂ ಟ್ರೈಲರ್ ನೋಡಿದ್ದೀರಿ. ಬಹಳ ಸಂತೋಷವಾಯಿತು. ನನಗೆ ಶುಭಾಶಯ ಕೋರಿದ ಚಿತ್ರರಂಗದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.