ಸಿನಿಮಾ ಸುದ್ದಿ

`ಸರ್ಕಾರ್'ಗೆ ಕತ್ತರಿ: ಸರ್ಕಾರದ ಉಚಿತ ವಸ್ತುಗಳಿಗೆ ಬೆಂಕಿ ಹಚ್ಚಿದ ವಿಜಯ್ ಅಭಿಮಾನಿಗಳು

ಆಡಳಿತರೂಢ ಎಐಎಡಿಎಂಕೆ ಸರ್ಕಾರದ ಒತ್ತಡಕ್ಕೆ ಮಣಿದು ನಟ ವಿಜಯ್ ಅಭಿನಯದ `ಸರ್ಕಾರ್' ಚಿತ್ರದಲ್ಲಿನ ನಾಲ್ಕು...

`ಸರ್ಕಾರ್'ಗೆ ಕತ್ತರಿ: ಸರ್ಕಾರದ ಉಚಿತ ವಸ್ತುಗಳಿಗೆ ಬೆಂಕಿ ಹಚ್ಚಿದ ವಿಜಯ್ ಅಭಿಮಾನಿಗಳು
ಚಿತ್ರದ ಸ್ಟಿಲ್
Published On :
ಚೆನ್ನೈ: ಆಡಳಿತರೂಢ ಎಐಎಡಿಎಂಕೆ ಸರ್ಕಾರದ ಒತ್ತಡಕ್ಕೆ ಮಣಿದು ನಟ ವಿಜಯ್ ಅಭಿನಯದ `ಸರ್ಕಾರ್' ಚಿತ್ರದಲ್ಲಿನ ನಾಲ್ಕು ದೃಶ್ಯಗಳಿಗೆ ಚಿತ್ರದ ನಿರ್ಮಾಪಕರು ಕತ್ತರಿ ಹಾಕಿದ ನಂತರ ವಿಜಯ್ ಅಭಿಮಾನಿಗಳು ತಮಿಳುನಾಡು ಸರ್ಕಾರ ತಮಗೆ ಉಚಿತವಾಗಿ ನೀಡಿದ್ದ ಮಿಕ್ಸಿ, ಗ್ರೈಂಡರ್, ಲ್ಯಾಪ್ ಟಾಪ್ ಗಳನ್ನು ಪುಡಿ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರು ನೀಡಿದ್ದ ಮಿಕ್ಸಿ, ಗ್ರೈಂಡರ್ ಹಾಗೂ ಲ್ಯಾಪ್ ಟಾಪ್ ಗಳನ್ನು ಒಡೆದು ಹಾಕಿದ್ದು, ಅದರ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಎಐಎಡಿಎಂಕೆ ಕಾರ್ಯಕರ್ತರು ವಿಜಯ್ ಬ್ಯಾರ್ ಹರಿದಿದ್ದರಿಂದ ತಾನು ಲ್ಯಾಪ್ ಟಾಪ್ ಮುರಿದಿದ್ದಾಗಿ ಅಭಿಮಾನಿಯೊಬ್ಬ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಸರ್ಕಾರ್ ಚಿತ್ರದಲ್ಲಿ ರಾಜಕೀಯ ಪಕ್ಷವೊಂದು ಉಚಿತವಾಗಿ ನೀಡುವ ವಸ್ತುಗಳಿಗೆ ಬೆಂಕಿ ಹಚ್ಚುವ ದೃಶ್ಯಗಳಿದ್ದು, ಚಿತ್ರದ ನಿರ್ದೇಶಕ ಎ.ಆರ್.ಮುರುಗದಾಸ್ ಆಕ್ಷೇಪಾರ್ಹ ದೃಶ್ಯಗಳನ್ನುತೆಗೆದು ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.