ಸಿನಿಮಾ ಸುದ್ದಿ

#MeToo ಆರೋಪ ಉದ್ದೇಶಪೂರ್ವಕ, ನಾನು ತಪ್ಪು ಮಾಡಿಲ್ಲ: ಪೋಲೀಸರೆದುರು ಅರ್ಜುನ್ ಸರ್ಜಾ ಹೇಳಿಕೆ

ನನ್ನ ಮೇಲಿನ ಶ್ರುತಿ ಹರಿಹರನ್ ಅವರ "ಮೀಟೂ" ಆರೋಪ ಉದ್ದೇಶಪೂರ್ವಕವಾಗಿದೆ. ನಾನು ಯಾವ ತಪ್ಪೂ ಮಾಡಿಲ್ಲ ಎಂದು ಬಹು ಭಾಷಾ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

#MeToo ಆರೋಪ ಉದ್ದೇಶಪೂರ್ವಕ, ನಾನು ತಪ್ಪು ಮಾಡಿಲ್ಲ: ಪೋಲೀಸರೆದುರು ಅರ್ಜುನ್ ಸರ್ಜಾ ಹೇಳಿಕೆ
ಅರ್ಜುನ್ ಸರ್ಜಾ, ಶ್ರುತಿ ಹರಿಹರನ್
Published On :
ಬೆಂಗಳೂರು: ನನ್ನ ಮೇಲಿನ ಶ್ರುತಿ ಹರಿಹರನ್ ಅವರ "ಮೀಟೂ" ಆರೋಪ ಉದ್ದೇಶಪೂರ್ವಕವಾಗಿದೆ. ನಾನು ಯಾವ ತಪ್ಪೂ ಮಾಡಿಲ್ಲ ಎಂದು ಬಹು ಭಾಷಾ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ಪೋಲೀಸರೆದುರು ನಟ ಹೇಳಿಕೆ ನೀಡಿದ್ದಾರೆ.
ಶ್ರುತಿ ಹರಿಹರನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ಪೋಲೀಸ್ ವಿಚಾರಣೆಗೆ ಹಾಜರಾದ ಅರ್ಜುನ್ ಸರ್ಜಾ "ಸಿನಿಮಾ ಕಥೆಗೆ ಅನುಗುಣವಾಗಿ ನಾನು ಅಭಿನಯಿಸಿದ್ದೇನೆ ಹೊರತು ಯಾವ ಅಸಭ್ಯ ವರ್ತನೆ ತೋರಿಸಿಲ್ಲ. ವಿಸ್ಮಯ ಚಿತ್ರದ ಚಿತ್ರೀಕರಣ ನಡೆದು ಎರಡು ವರ್ಷಗಳ ಬಳಿಕ ಶ್ರುತಿ ಮಾಡಿರುವ ಈ ಆರೋಪ ಉದ್ದೇಶಪೂರ್ವಕವಾದದ್ದು. ಅಲ್ಲದೆ ಇದರ ಹಿಂದೆ ಬೇರೆಯವರ ಕೈವಾಡವೂ ಇದೆ." ಎಂದಿದ್ದಾರೆ.
ಸರ್ಜಾಗೆ 50 ಪ್ರಶ್ನೆ
ಸರ್ಜಾ ಅವರಿಗೆ ಪೋಲೀಸರು ಸುಮಾರು 50 ಪ್ರಶ್ನೆಗಳನ್ನು ಕೇಳಿದ್ದಾರೆ. ಕಬ್ಬನ್ ಪಾರ್ಕ್ ಪೋಲೀಸ್ ಠಾಣೆ ಅಧಿಕಾರಿ  ಅಯ್ಯಣ್ಣ ರೆಡ್ಡಿ ನಟನ ವಿಚಾರಣೆ ನಡೆಸಿದ್ದಾರೆ.
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ವೇಳೆ ನೀವು ಅಸಭ್ಯವಾಗಿ ವರ್ತಿಸಿದ್ದಿರಾ?ಶ್ರುತಿ ದೇಹದ ಹಿಂಭಾಗ, ಎದೆ, ತೊಡೆಗಳನ್ನು ಸ್ಪರ್ಶಿಸಿದ್ದಿರಾ? ಎಂದು ಕೇಳಲಾದ ಪ್ರಶ್ನೆಗೆ ಸರ್ಜಾ ನಾನು ಯಾವ ಅಸಭ್ಯ ವರ್ತನೆ ಮಾಡಿಲ್ಲ. ಆಕೆಯನ್ನು ನಾನು ತಬ್ಬಿಕೊಂಡಿಲ್ಲ, ಅವಳ ಎದೆ, ತೊಡೆಗಳನ್ನು, ದೇಹದ ಹಿಂಭಾಗವನ್ನು ಸ್ಪರ್ಷಿಸಿಲ್ಲ ಎಂದು ಸರ್ಜಾ ಹೇಳಿದ್ದಾರೆ. ಸಹ ನಿರ್ದೇಶಕ ಭರತ್ ನೀಲಕಂಠ, ಸಹ ನಿರ್ದೇಶಕಿ ಮೋನಿಕಾ  ಸಹ ಇದೇ ಸ್ಪಷ್ಟನೆ ನೀಡಿರುವುದನ್ನು ಅವರು ಉಲ್ಲೇಖ್ಳಿಸಿದ್ದಾರೆ.
ದೇವನಹಳ್ಳಿಯ ಶೂಟಿಂಗ್ ವೇಳೆ ರೆಸಾರ್ಟ್ ಗೆ ಕರೆದಿದ್ದಿರೆ? ಎಂಬ ಪ್ರಶ್ನೆಗೆ ಸಹ ಸರ್ಜಾ ನಾನು ಶ್ರುತಿಯನ್ನು ರೆಸಾರ್ಟ್ ಗೆ ಕರೆದಿಲ್ಲ.ಶೂಟಿಂಗ್ ಸ್ಪಾಟ್ ನಲ್ಲಿ ಇದ್ದವರು ಈಗಾಗಲೇ ಈ ಬಗ್ಗೆ ಹೇಳಿಕೆ ನ್ಬಿಡಿದ್ದಾರೆ. ಈ ಆರೋಪವೆಲ್ಲಾ ಸುಳ್ಳು ಎಂದಿದ್ದಾರೆ.
ದೇವನಹಳ್ಳಿ ಟ್ರಾಫಿಕ್ ಸಿಗ್ನಲ್ ಬಳಿ ನಾನು ಶ್ರುತಿಯನ್ನು ಮುಖಾಮುಖಿಯಾಗಿಲ್ಲ, ಆಕೆಗೆ ಯಾವ ಬೆದರಿಕೆ ಹಾಕಿಲ್ಲ ಎಂದು ಸರ್ಜಾ ಹೇಳಿದ್ದಾರೆ. ಅಲ್ಲದೆ ಯುಬಿ ಸಿಟಿ ಲಾಂಚ್ ನಲ್ಲಿ ಕುಳಿತಿದ್ದ ಶ್ರುತಿಯೊಡನೆ ಸಾಮಾನ್ಯ ಮಾತನ್ನಾಡಿರುವುದು ನಿಜ ಹೊರತು ಯಾವ ಕೆಟ್ಟ ವರ್ತನೆ ತೋರಿಲ್ಲ ಎಂದು ಅವರು ಹೇಳಿದರು.
"ಶ್ರುತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾನು ನ್ಯಾಯಾಲಯದ ಮೊರೆ ಹೋಗಿದ್ದು ನನಗೆ ನ್ಯಾಯ ಸಿಕ್ಕುವ ಭರವಸೆ ಇದೆ" ನಟ ಸರ್ಜಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.