ದೀಪಿಕಾ-ರಣವೀರ್ ಮದುವೆ ಸಂಭ್ರಮ ಶುರು
ಬಾಲಿವುಡ್ ನಟಿ ದೀಪಿಕಾ ಹಾಗೂ ನಟ ರಣವೀರ್ ಸಿಂಗ್ ಮದುವೆ ಸಂಭ್ರಮ ಜೋರಾಗಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ...

Published On :
ಮುಂಬೈ: ಬಾಲಿವುಡ್ ನಟಿ ದೀಪಿಕಾ ಹಾಗೂ ನಟ ರಣವೀರ್ ಸಿಂಗ್ ಮದುವೆ ಸಂಭ್ರಮ ಜೋರಾಗಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ.
ಮದುವೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿರುವ ದೀಪಿಕಾ ಅವರು, ಪೂಜಾ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ದೀಪಿಕಾ ಅವರು ಪೂಜೆ ನೆರವೇರಿಸುತ್ತಿರುವ ಫೋಟೋವನ್ನು ದೀಪಿಕಾ ಅವರ ವಸ್ತ್ರವಿನ್ಯಾಸಕಿ ಶಲೀನಾ ನಥಾನಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಹಳ ಸಂತೋಷವಾಗುತ್ತಿದೆ. ಆರಂಭಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ವಿಶ್ವದಲ್ಲಿರುವ ಅತ್ಯಂತ ಹೆಚ್ಚು ಸಂತೋಷಕ್ಕೆ ನೀವು ಅರ್ಹ ಎಂದು ನಥಾನಿ ಹೇಳಿದ್ದಾರೆ. ಫೋಟೋದಲ್ಲಿ ಕೇಸರಿ ಬಣ್ಣದ ಚೂಡಿಧಾರ್ ಹಾಕಿರುವ ದೀಪಿಕಾ ಅವರು ಪ್ರಾರ್ಥನೆ ಮಾಡುತ್ತಿರುವುದು ಕಂಡು ಬಂದಿದೆ.
ಮತ್ತೊಂದು ಫೋಟೋವನ್ನೂ ಕೂಡ ಹಂಚಿಕೊಂಡಿರುವ ನಥಾನಿಯವರು, ಪೂಜೆಯಲ್ಲಿ ನಾನೂ ಕೂಡ ಭಾಗಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಹೊಸ ಅಧ್ಯಾಯನ ಆರಂಭ ಎಂದು ತಿಳಿಸಿದ್ದಾರೆ.
ಬಹು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದ ದೀಪಿಕಾ ಹಾಗೂ ರಣವೀರ್ ಅವರು ಕೊನೆಗೂ ತಮ್ಮ ವಿವಾದ ದಿನಾಂಕವನ್ನು ಘೋಷಣೆ ಮಾಡಿದ್ದರು. ನವೆಂಬರ್ 14 ಮತ್ತು 15 ರಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


