ಸಿನಿಮಾ ಸುದ್ದಿ

ನನ್ನ ಅಭಿಮಾನಿಗಳಂತೆ ಚಿತ್ರದ ಟೈಟಲ್ ಕೇಳಲು ನಾನೂ ಕುತೂಹಲ ಹೊಂದಿದ್ದೇನೆ: ಪುನೀತ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಮುಂದಿನ ಸಿನಮಾದಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ...

ನನ್ನ ಅಭಿಮಾನಿಗಳಂತೆ ಚಿತ್ರದ ಟೈಟಲ್ ಕೇಳಲು ನಾನೂ ಕುತೂಹಲ ಹೊಂದಿದ್ದೇನೆ: ಪುನೀತ್
ಪುನೀತ್ ರಾಜ್ ಕುಮಾರ್
Published On :
ಬೆಂಗಳೂರು: ಸಂತೋಷ್ ಆನಂದ್ ರಾಮ್ ನಿರ್ದೇಶನದ ಮುಂದಿನ ಸಿನಮಾದಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮವಾಗಿಲ್ಲ, 
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಸಿನಮಾ ತಯಾರಾಗುತ್ತಿದ್ದು, ಕನ್ನಡ ರಾಜ್ಯೋತ್ಸವ ಅಂದರೆ ನವೆಂಬರೇ 1 ರಂದು ಸಿನಿಮಾ ಟೈಟಲ್ ಪ್ರಕಟಿಸುವುದಾಗಿ ಚಿತ್ರ ತಂಡ ಹೇಳಿತ್ತು, ಅದಕ್ಕೂ ಮುನ್ನ ಸಿನಿ ಎಕ್ಸ್ ಪ್ರೆಸ್ ಪುನೀತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿತ್ತು..
 ಈ ವೇಳೆ ಮಾತನಾಡಿದ ಪುನೀತ್, ನನ್ನ ತಂದೆ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಯಾವ ಟೈಟಲ್ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ನನಗು ಇದೆ. ಚಿತ್ರದ ಟೈಟಲ್ ಬಗ್ಗೆ ನನ್ನ ಅಭಿಮಾನಿಗಳಲ್ಲಿ ಎಷ್ಟು ಕುತೂಹಲವಿದೆಯೋ ಅಷ್ಟೆ ಉತ್ಸುಕತೆಯಿಂದ ನಾನು ಇದ್ದೇನೆ.
ಈ ಮೊದಲು ರಾಜಕುಮಾರ ಸಿನಿಮಾ ಟೈಟಲ್ ತೆಗೆದುಕೊಳ್ಳುವಾಗ ನನಗೆ ಭಯವಾಗಿತ್ತು, ಒಂದು ವೇಳೆ ಸಿನಿಮಾ ಉತ್ತಮವಾಗಿ ಬರದಿದ್ದರೆ ಎಂಬ ಆತಂಕ ಉಂಟಾಗಿತ್ತು, ಆದರೆ ಆ ಸಿನಿಮಾ ನನ್ನ ನಿರಿಕ್ಷೆ ಮೀರಿ ಪ್ರದರ್ಶನ ಕಂಡಿತ್ತು ಎಂದು ಹೇಳಿದ್ದಾರೆ,
ಜ್ವಾಲಾಮುಖಿ, ಕ್ರಾಂತಿ ವೀರ, ಪರಶುರಾಮ ಸಿನಿಮಾ ಹೆಸರುಗಳು ಕೇಳಿ ಬರುತ್ತಿವೆ ಅಂತಿಮವಾಗಿ ಯಾವ ಟೈಟಲ್ ಆಯ್ಕೆ ಮಾಡುತ್ತಾರೋ ತಿಳಿದಿಲ್ಲ, 1985 ರಲ್ಲಿ ರಾಜ್ ಕುಮಾರ್ ಅಭಿನಯದ ಧೃವತಾರೆ ಸಿನಿಮಾ ತಕೆರೆ ಕಂಡಿತ್ತು, ಹಿಗಾಗಿ ಧೃವ ನಕ್ಷತ್ರ ಎಂಬ ಟೈಟಲ್ ಪುನೀತ್ ಸಿನಿಮಾ ಗೆ ಇಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.