ವಿಶ್ವ ಪ್ರಸಾದ್ ಮುಡಿಗೆ ಸರಿಗಮಪ ಲಿಟಲ್ ಚಾಂಪ್ ಸೀಸನ್ 14 ರ ಕಿರೀಟ
ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ 'ಸರಿಗಮಪ ಲಿಟಲ್ ಚಾಂ ಸೀಸನ್ 14'ರ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳಗಾವಿಯ ವಿಶ್ವ ಪ್ರಸಾದ್ ಗೆಲುವಿನ ಕಿರೀಟವನ್ನು ...

Published On :
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ 'ಸರಿಗಮಪ ಲಿಟಲ್ ಚಾಂ ಸೀಸನ್ 14'ರ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳಗಾವಿಯ ವಿಶ್ವ ಪ್ರಸಾದ್ ಗೆಲುವಿನ ಕಿರೀಟವನ್ನು ಧರಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ನ ವೈಟ್ ಆರ್ಕಿಡ್ಸ್ ಸಭಾಭವನದಲ್ಲಿ ನಿನ್ನೆ ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಉಡುಪಿಯ ಅಭಿಜಾತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಶಿಶು ತಾನಸೇನ್ ಜ್ಞಾನೇಶ್, ಬೆಂಗಳೂರಿನ ಕೀರ್ತನ, ಮತ್ತು ಕ್ವಾರ್ಟರ್ ಫಿನಾಲೆಯಿಂದ ನೇರವಾಗಿ ಫೈನಲ್ ತಲುಪಿದ ಚನ್ನಗಿರಿಯ ತೇಜಸ್ ಶಾಸ್ತ್ರಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬಂತು.
ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬನಾಗಿದ್ದ ವಿಶ್ವ ಪ್ರಸಾದ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಕೀರ್ತನಾ ಮತ್ತು ಜ್ಞಾನೇಶ್ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡರು. ತೇಜಸ್ ಮೂರನೇ ಮತ್ತು ಅಭಿಜಿತ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಮೂವರು ತೀರ್ಪುಗಾರರು ಮತ್ತು ಸಾರ್ವಜನಿಕ ಮತಗಳ ಸಹಾಯದಿಂದ ವಿಜೇತರನ್ನು ಆಯ್ಕೆ ಮಾಡಲಾಯ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


