'ರುಸ್ತುಮ್'ನಲ್ಲಿ ರೋಹಿತ್ ಗೆ ಖಾಕಿ ಖದರ್
ಬಕಾಸುರ ಚಿತ್ರದಲ್ಲಿ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ನಟಿಸಿದ್ದ ರೋಹಿತ್ ಈಗ ರುಸ್ತುಮ್ ಚಿತ್ರದಲ್ಲಿ ಖಾಕಿ ತೊಡಲು ಸಿದ್ಧರಾಗಿದ್ದಾರೆ.

Published On :
ಬಕಾಸುರ ಚಿತ್ರದಲ್ಲಿ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ನಟಿಸಿದ್ದ ರೋಹಿತ್ ಈಗ ರುಸ್ತುಮ್ ಚಿತ್ರದಲ್ಲಿ ಖಾಕಿ ತೊಡಲು ಸಿದ್ಧರಾಗಿದ್ದಾರೆ.
ರವಿ ವರ್ಮ ನಿರ್ದೇಶಿಸುತ್ತಿರುವ ರುಸ್ತುಮ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು, ಶ್ರದ್ಧಾ ಶ್ರೀನಾಥ್, ಮಯೂರಿ ಸಹ ನಟಿಸುತ್ತಿದ್ದ, ಚಿತ್ರದಲ್ಲಿರುವ ತಾರಾಗಣಕ್ಕೆ ರೋಹಿತ್ ಹೊಸ ಸೇರ್ಪಡೆಯಾಗಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ರೋಹಿತ್, ಖಾಕಿ ತೊಟ್ಟು ಪೊಲೀಸ್ ಅವತಾರದಲ್ಲಿರುವ ಸೆಲ್ಫಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರೇಡಿಯೋ ಜಾಕಿಯಾಗಿದ್ದ ರೋಹಿತ್, ಕರ್ವ ಮೂಲಕ ತಮ್ಮ ಸಿನಿಮಾ ಜೀವನದ ಪಯಣವನ್ನು ಆರಂಭಿಸಿದ್ದರು. ರುಸ್ತುಮ್ ಚಿತ್ರಕ್ಕೆ ಅನೂಪ್ ಸಿಳಿನ್ ಸಂಗೀತ ಹಾಗೂ ಮಹೇಂದ್ರ ಸಿಂಹ ಸಿನಿಮೆಟೋಗ್ರಾಫಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


